ಭಟ್ಕಳ:ಭಟ್ಕಳದ ಜಾಲಿ ತಲಗೇರಿಯ ಕ್ರಿಕೆಟ್ ಮೈದಾನ ಪಕ್ಕ ಅಕ್ರಮವಾಗಿ ಅಂದ ಅಂದರ್ ಬಹಾರ್ ಇಸ್ಪೀಟ್ ಆಟ ಆಡುತ್ತಿದ್ದವರ ಮೇಲೆ ಭಟ್ಕಳ ನಗರ ಪೋಲಿಸರಿಂದ ದಾಳಿ ವೇಳೆ ಮೀನುಗಾರಿಕೆ ಮಾಡಿಕೊಂಡಿದ್ದ ನಾರಾಯಣಗೊಂಡ ಸಿಕ್ಕಿಬಿದ್ದಿದ್ದು ಅವನ ಜೊತೆಯಲ್ಲಿದ್ದ ಏಳು ಮಂದಿ ಪರಾರಿಯಾಗಿದ್ದಾರೆ.
ತಲೆಗೇರಿಯ ಕ್ರಿಕೆಟ್ ಮೈದಾನದ ಪಕ್ಕದಲ್ಲಿ ದೊಡ್ಡ ಪ್ರಮಾಣದ ಗಿಡಮರಗಳು ಬೆಳೆದಿದ್ದು ಅವುಗಳ ಮಧ್ಯೆ ಸಾಮಾನ್ಯ ಎಂಬಂತೆ ಅಲ್ಲಿ ಇಸ್ಪಿಟ್ ಎಲೆ, ಮೇಣದ ಬತ್ತಿ ಬಿದ್ದಿದ್ದು ಅಕ್ರಮವಾಗಿ ಇಸ್ಪೀಟ್ ಆಟದ ಅಡ್ಡವಾಗಿ ಮಾರ್ಪಟ್ಟಿದ್ದು ಕಂಡುಬರುತ್ತದೆ. ಅಕ್ಟೋಬರ್ 19ರಂದು ಸಂಜೆ ಭಟ್ಕಳ ಪಟ್ಟಣ ಪೊಲೀಸ್ ಠಾಣೆಯ ಉಪನಿರಿಕ್ಷಕರಾದ ನವೀನ್ ನಾಯಕ್ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಓರ್ವ ನನ್ನ ಬಂಧಿಸಿದ್ದು ಬಾಕಿ ಉಳಿದವರು ಓಡಿಹೋಗಿದ್ದಾರೆ.ಸೆಂಟ್ರಿಂಗ್ ಕೆಲಸ ಮಾಡುವ ಮಾದೇವ್ ಗೊಂಡ ಹನುಮಾನ್ ನಗರದ ಶಂಕರ್ ನಾಯಕ್ ಓಡಿ ಹೋದವರು. ಓಡಿ ಹೋದವರ ಮೂವರ ಗುರುತು ಪತ್ತೆ ಹಚ್ಚಿದ್ದಾರೆ. ಇನ್ನು ಮೂವರ ಗುರುತಿಸಲು ಸಾಧ್ಯವಾಗಲಿಲ್ಲ. ದಾಳಿಯ ವೇಳೆ ಸಾವಿರದ ಏಳುನೂರು ರೂಪಾಯಿಯನ್ನ ವಶಪಡಿಸಿಕೊಂಡು ನ್ಯಾಯಕ್ಕೆ ಒಪ್ಪಿಸಿದ್ದಾರೆ. ಸದ್ಯ ಓಡಿ ಹೋದವರ ಹುಡುಕಾಟ ಮುಂದುವರೆದಿದೆ.
ಆದರೆ ನಾರಾಯಣ ಗೊಂಡ ಮಾತ್ರ ಪೊಲೀಸರಗೆ ಸಿಕ್ಕಿಬಿದ್ದರು. ಹಬ್ಬದ ಆಟ ಎಂದು ಪೊಲೀಸರ ಬಳಿ ಹೇಳಿದರು ಪೊಲೀಸರು ಅವನ ಮಾತು ಲೆಕ್ಕಿಸದೆ ಬಂದಿಸಿದ್ದಾರೆ. ಕಾನೂನುಬಾಹಿರ ಕೆಲಸ ಮಾಡಿದಕ್ಕಾಗಿ ಓಡಿ ಹೋಗಿದ್ದವರ ಜೊತೆ ಸಿಕ್ಕಬಿದ್ದವರ ಹೆಸರನ್ನು ದಾಖಲಿಸಿ ಪ್ರಕರಣ ದಾಖಲಿಸಿದರು.