
ಭಟ್ಕಳದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ಪಕ್ಕದ ಹಣ್ಣು ಮತ್ತು ತರಕಾರಿ ಸೂಪರ್ ಮಾರ್ಕೆಟ್ ಗೆ ಆಕಸ್ಮಿಕ್ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹಣ್ಣು ತರಕಾರಿ ಸುಟ್ಟು ಕರಕಲಾಗಿದೆ. ಈ ಸೂಪರ್ ಮಾರ್ಕೆಟ್ ಇಪ್ತಿಕಾರ್ ರುಕ್ಮುದ್ದೀನ್ ಮಾಲಕತ್ವದ ಸೂಪರ್ ಮಾರ್ಕೆಟ್ ಆಗಿದ್ದು ಸೋಮವಾರ ಮಧ್ಯಾಹ್ನ 2.30 ಸುಮಾರಿಗೆ ಈ ಘಟನೆ ನಡೆದಿದೆ. ಸಂಗ್ರಹಣ ಕೊಠಡಿಯ ಎಸಿ ಕಂಪ್ರೆಸರ್ ಗು ಬೆಂಕಿ ಹತ್ತಿಕೊಂಡು ಸುಮಾರು 25 ರಿಂದ 30 ಲಕ್ಷ ರೂಪಾಯಿ ಸ್ವತ್ತು ಬೆಂಕಿಗೆ ಆಹುತಿ ಆಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು, ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಮುಗಿಲೆತ್ತರಕ್ಕೆ ದಟ್ಟವಾದ ಹೊಗೆ ಆವರಿಸಿಕೊಂಡಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಯಿತು. ಹೊನ್ನಾವರ ಮತ್ತು ಬೈಂದೂರಿನಿಂದಲೂ ಅಗ್ನಿಶಾಮಕ ದಳದವರನ್ನ ಕರೆಸಲಾಯಿತು. ಅಗ್ನಿಶಾಮಕ ದಳದ ಮತ್ತು ಪೊಲೀಸ್ ಅವರ ಹರಸಾಹಸದಿಂದಾಗಿ ಬೆಂಕಿಯನ್ನು ಸಂಪೂರ್ಣ ವಾಗಿ ನಂದಿಸಲು ಯಶಸ್ವಿಯಾದರು. ಸ್ಥಳಕ್ಕೆ ಭಟ್ಕಳ ತಹಶೀಲ್ದರಾದ ನಾಗೇಂದ್ರ ಕೋಳಾ ಶೆಟ್ಟಿ, ಹೆಸ್ಕಾಂ ಏ ಇ ಇ ಮಂಜುನಾಥ್ ನಾಯಕ್, ಭಟ್ಕಳ ಸಹರ ಠಾಣಾ ಸಿಪಿಐ ದಿವಾಕರ್ ಎಸ್ಐ ನವೀನ್ ಅಗ್ನಿಶಾಮಕ ದಳದ ಮೊಹಮ್ಮದ್ ಶಫಿ ಸ್ಥಳಕ್ಕೆ ಭೇಟಿ ನೀಡಿದರು. ಭಟ್ಕಳದಲ್ಲಿ ತೀವ್ರವಾದ ರಕ್ಷಣ ಕೊರತೆ ಎದ್ದು ಕಾಣುತ್ತದೆ ಎಂದು ಜನರು ಆಕ್ರೋಶ ಹೊರಹಾಕಿದ್ದರು.
ವರದಿ: ಉಲ್ಲಾಸ್ ಶಾನಭಾಗ್