“ಹಿಂದೂ ಜಾಗರಣ ವೇದಿಕೆ ಭಟ್ಕಳ ಅಖಂಡ ಭಾರತ ಸಂಕಲ್ಪ”

Share

ಭಟ್ಕಳ: ಹಿಂದೂ ಜಾಗರಣ ವೇದಿಕೆ ಭಟ್ಕಳ ಅಖಂಡ ಭಾರತ ಸಂಕಲ್ಪ ದಿನದ ಹಿನ್ನೆಲೆ ನಡೆದ ಬೃಹತ್ ಪಂಜಿನ ಮೆರವಣಿಗೆಯು ಇಲ್ಲಿನ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕಡವಿನಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ ಭಟ್
ಉದ್ಘಾಟಿಸಿದರು.

ಮೆರವಣಿಗೆ ಮೊದಲು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನದ ಮೂಲಕ ಪ್ರಾರಂಭವಾದ ಮೆರವಣಿಗೆ ಮುಸ್ಬಾ ಸ್ಟ್ರೀಟ್‌ನ ಮೂಲಕ ಮಾರಿಗುಡಿ ಚನ್ನಪಟ್ಟಣ ಹನುಮಂತ ದೇವಸ್ಥಾನ, ಹೂವಿನ ಚೌಕಗಳನ್ನು ಸುತ್ತಿ ಪುನಃ ಪೇಟೆ ಮುಖ್ಯ ರಸ್ತೆಯ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ -66 ರ ಮೂಲಕ ಸಂಶುದ್ದೀನ್ ವೃತ್ತದ ಬಳಿ ಬಂದು ಅಲ್ಲಿಂದ ಪುನಃ ನಗರ ಪೋಲಿಸ್ ಠಾಣೆ ಮಾರ್ಗದಿಂದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನಕ್ಕೆ ಬಂದು ಸೇರಿತು.

ನಂತರ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ : ರವೀಂದ್ರ ಮಂಗಳ , ವಕ್ತಾರರಾಗಿ ಶ್ರೀಕಾಂತ್ ಜೀ
ಪಂಜಿನ ಮೆರವಣಿಗೆ ಉದ್ಘಾಟರಾಗಿ ಪ್ರಕಾಶ ಭಟ್ ,
ಹಿಂದೂ ಜಾಗರಣ ವೇದಿಕೆ ಸಂಚಾಲಕರಾದ ಜಯಂತ ನಾಯ್ಕ
ಸಹ ಸಂಚಾಲಕರಾದ ನಾಗೇಶ ಹೊನ್ನೇಗದ್ದೆ. ಕುಮಾರ ಹನುಮಾನಗರ್. ರಾಘವೇಂದ್ರ ಮುಟ್ಟಳ್ಳಿ. ಮಾಜಿ ಶಾಸಕರಾದ ಸುನಿಲ್ ನಾಯ್ಕ. ಗೋವಿಂದ ನಾಯ್ಕ. ಶ್ರೀಕಾಂತ ನಾಯ್ಕ. ದಿನೇಶ ನಾಯ್ಕ ಮುಂಡಳ್ಳಿ.

ಶ್ರೀನಿವಾಸ ನಾಯ್ಕ ಹನುಮಾನಗರ ಸಂಘ ಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!