ಅಪ್ರಾಪ್ತೆಯ ಅಪಹರಣ ಆರೋಪಿಗಳನ್ನು ಆರು ಗಂಟೆಯೊಳಗೆ ಪತ್ತೆ ಮಾಡಿ ಬಂಧಿಸಿದ ಭಟ್ಕಳ ಗ್ರಾಮೀಣ ಪೊಲೀಸ್

Share

ಭಟ್ಕಳ: ಹಾವೇರಿ ತಾಲೂಕಿನ ಶಿವಪುರದ ಕಾಮನಹಳ್ಳಿ ನಿವಾಸಿಯಾದ ಶಮ್ಸ್ ದ್ ಮುಕುಬುಲ್ಲ ಇವರು ಹಾಲಿ 1ನೇ ಕ್ರಾಸ್ ಹನಿಫಾಬಾದ ಭಟ್ಕಳ ನಿವಾಸಿಯಾದ ಇವರು ದಿನಾಂಕ 15 -8- 2025 ರಂದು 2.30 ಗಂಟೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ಮಗಳಾದ ಅಪರೇಜ ಭಾನು ಯಾಸಿನ್ ಮುಜಾಪರ್ 14 ವರ್ಷ 11 ತಿಂಗಳು ಇವಳನ್ನ ಒಂದನೇ ಕ್ರಾಸ್ ಹನಿಫಾಬಾದ ಭಟ್ಕಳದಿಂದ 14- 8- 2025ರಂದು 11:30 ಗಂಟೆಯ ಸುಮಾರಿಗೆ ಆಸಿಫ್ ಜಮಾಲಸಾಬ್ ಶಿವಪುರ ಹಾವೇರಿ ಮತ್ತು ಮಹಮ್ಮದ್ ಮೊಸಿನ್ ರಿಜ್ವಾನ್ ತಗರುಗೋಡು ಜಾಲಿ ಭಟ್ಕಳ ಇವರು ಸೇರಿ ಬೊಲೆರೋ ಪಿಕಪ್ ವಾಹನ ಕೆ ಎ 47 – 8178 ನೇದರ ಮೇಲೆ ಅಪಹರಣ ಮಾಡಿಕೊಂಡು ಹೋಗಿದ್ದು ನನ್ನ ಮಗಳನ್ನು ಪತ್ತೆ ಮಾಡಿ ಕೊಡುವಂತೆ ದೂರು ನೀಡಿದ್ದರು . ದೂರು ಪಡೆದ ಪೊಲೀಸರು ಕೂಡಲೇ ಕಾರ್ಯಪ್ರವರ್ತರಾಗಿ ಅಪಹರಣಕ್ಕೆ ಒಳಗಾದ 6:00 ಒಳಗೆ ಆರೋಪಿಗಳನ್ನ ಪತ್ತೆ ಹಚ್ಚಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ತೆ ಕಾರ್ಯದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗ ರೆಡ್ಡಿ ಏ ಎಸ್ ಐ ನಾರಾಯಣ ಸಿಬ್ಬಂದಿಯಾದ ನಾರಾಯಣ್ ಎಚ್ ಸಿ ಮತ್ತು ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದರು. ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೀಪವಾನ್ ಎಂ ಎನ್ ಹಾಗೂ ಸಾರ್ವಜನಿಕರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನ ಅಭಿನಂದಿಸಿದ್ದಾರೆ.

ವರದಿಗಾರರು: ಉಲ್ಲಾಸ್ ಶಾನಭಾಗ್

Leave a Reply

Your email address will not be published. Required fields are marked *

error: Content is protected !!