
ಉತ್ತರ ಕನ್ನಡ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗುರುವಾರ ಸಂಜೆ ಭಟ್ಕಳ ತಾಲೂಕಿನ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದರು.
ಅವರುಮೊದಲು ಶ್ರೀ ಭವಾನಿ ಶಂಕರ ದೇವರ ದರ್ಶನ ಪಡೆದು ನಂತರ ಚಾತುರ್ಮಾಸ ನಿರತರಾದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಶಾಸಕ ಸುನಿಲ್ ನಾಯ್ಕ್, ಬಿಜೆಪಿ ಮಂಡಲದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಮುಖರಾದ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ್, ಸೂರಜ್ ನಾಯ್ಕ್ ಸೋನಿ, ಶ್ರೀಕಾಂತ್ ನಾಯ್ಕ್, ಕೇದಾರ್ ಕೊಲ್ಲೆ, ಭಾಸ್ಕರ್ ದೈಮನೆ, ಶ್ರೀ ಮಠದ ಉಪ ಪ್ರಧಾನ ವ್ಯವಸ್ಥಾಪಕ ಸೂರಜ್ ಬಸವಳ್ಳಿ, ಸತೀಶ್ ಕೊಪ್ಪೀಕರ್, ಜಯದೇವ್ ನೀಲಕಣಿ ಚಿತ್ರಾಪುರ ಮಠದ ಹಾಗೂ ಚಾತುರ್ಮಾಸ ಕಮಿಟಿ ಅಧ್ಯಕ್ಷ ಪ್ರವೀಣ್ ಕಡ್ಲೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ ಶಾನಭಾಗ ಶಿರಾಲಿ.
