ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತೆಂಗಿನ ಗುಂಡಿ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿದ ಭಟ್ಕಳ ಪೊಲೀಸರು ಆರೋಪಿ ಓರ್ವನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಮತ್ತೋರ್ವ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಹೊನ್ನಾವರತಾಲೂಕಿನ ಕಾಸರಗೋಡು ನಿವಾಸಿಯಾದ ಸೈಯದ್ ಮುಕ್ತಿಯಾರ ಬಂಧಿತಆರೋಪಿಯಾಗಿದ್ದಾನೆ.
ಪರಾರಿಯಾದ ಸಯ್ಯದ್ ಗುಲ್ದಾರ್(22) ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಕಾರಿನಲ್ಲಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಭಟ್ಕಳ ಶಹರ ಠಾಣೆಯ ಪಿಎಸ್ಐ ನವೀನ್ ಎಸ್ ನಾಯ್ಕ್ ಇವರ ನೇತೃತ್ವದ ತಂಡ ದಾಳಿ ನಡೆಸಿ ಈ ವೇಳೆ ಸರಿಸುಮಾರು 50,000 ರೂಪಾಯಿ ಮೌಲ್ಯದ 1750 ಗ್ರಾಂ ನಿಷೇಧಿತ ಗಾಂಜಾ, ಚಿಕ್ಕ ಗಾತ್ರದ ಡಿಜಿಟಲ್ ತೂಕ ಯಂತ್ರ, ಕಾರು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
NDPS ಕಾಯ್ದೆ ಅಡಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ನಾಪತ್ತೆ ಯಾದವನಿಗಾಗಿ ಶೋಧ ಕಾರ್ಯ ನಡೆಸ ಲಾಗಿದೆ.
ವರದಿ:ಉಲ್ಲಾಸ್ ಶಾನಭಾಗ ಶಿರಾಲಿ.
“ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತೆಂಗಿನ ಗುಂಡಿ ಕ್ರಾಸ್ ಬಳಿ ಗಾಂಜಾ ವಶ”
