

ಪತ್ರಕರ್ತರ ಮೇಲೆ ದಾಳಿ ನಡೆದರೆ ಕಾರ್ಯನಿರತ ಪತ್ರಕರ್ತರ ಧ್ವನಿ ಪತ್ರಕರ್ತರ ಬೆನ್ನಿಗೆ ನಿಲ್ಲಲಿದೆ : ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಂಗ್ಲೆ ಹೇಳಿಕೆ
ಭಟ್ಕಳ:ಭಟ್ಕಳ ತಾಲೂಕಿನಲ್ಲಿ ಹೊಸದಾದ ಪತ್ರಕರ್ತರ ಸಂಘಟನೆ ಒಂದು ಹುಟ್ಟಿಕೊಂಡಿದ್ದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸ್ಥಾಪನೆಯಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಹೇಳಿದರು*
ಭಟ್ಕಳ ತಾಲೂಕಿನಲ್ಲಿ ಈಗ ಮತ್ತೊಂದು ಪತ್ರಕರ್ತರ ಸಂಘಟನೆ ಒಂದು ಹುಟ್ಟಿಕೊಂಡಿದೆ ಆ ಪತ್ರಕರ್ತರ ಸಂಘಟನೆ ಯಾವುದೆಂದರೆ ಅದೇ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಾಗಿದೆ ಇದರ ರಾಜ್ಯ ಅಧ್ಯಕ್ಷರು ಮಲ್ಲಿಕಾರ್ಜುನ್ ಬಂಗ್ಲೆಯವರಾಗಿದ್ದು ತಾಲೂಕ ಪತ್ರಕರ್ತರ ಈ ಸಂಘಟನೆಯಲ್ಲಿ ಅಧ್ಯಕ್ಷರಾಗಿ ಶಂಕರ್ ನಾಯ್ಕ್ , ಪ್ರಧಾನಕಾರ್ಯದರ್ಶಿಯಾಗಿ ಅರ್ಜುನ್ ಎಂ ಮಲ್ಯ, ಉಪಾಧ್ಯಕ್ಷರಾಗಿ ಉಲ್ಲಾಸ್ ಶಾನಬಾಗ್, ಖಜಂಚಿಯಾಗಿ ನಸೀಮುಲ್ಲಾ ಘನೀ ಶಭಾOದ್ರಿ ಆಯ್ಕೆಯಾಗಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತ ಧ್ವನಿಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲೆಯವರು ತಿಳಿಸಿದರು. ಸದಸ್ಯರಾಗಿ ಈಶ್ವರ್ ನಾಯ್ಕ , ಜಾವೇದ್ ಅಹಮದ್ ಸಿಂಗೇರಿ, ಮಾರುತಿ ನಾಯ್ಕ ಅಯ್ಕೆ ಆಗಿದ್ದಾರೆ.
ಈ ಬಗ್ಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯದಾದ್ಯಂತ ಸಂಘಟನೆ ಆಗಿದೆ ರಾಜ್ಯದ ಯಾವುದೇ ಮೂಲೆಯ ಪತ್ರಕರ್ತರ ಮೇಲೆ ಹಲ್ಲೆ ಅಥವಾ ದಬ್ಬಾಳಿಕೆ ನಡೆದಾಗ ನಮ್ಮ ಸಂಘಟನೆ ಅಂತವರ ಬೆನ್ನಿಗೆ ನಿಲ್ಲುತ್ತದೆ. ಪತ್ರಕರ್ತರ ಕುಂದು ಕೊರತೆಗಳಿಗೆ ಧ್ವನಿ ಆಗಲಿ, ರಾಜ್ಯಾದ್ಯಂತ ನಾಲ್ಕು ಸಾವಿರ ಅಧಿಕ ಸದಸ್ಯರನ್ನು ಹೊಂದಿದೆ ಎಂದು ಹೇಳಿದರು.
ಒಟ್ಟಾರೆ ಭಟ್ಕಳ ತಾಲೂಕಿನಲ್ಲಿ ಪತ್ರಕರ್ತರ ಸಂಘಟನೆಯಾದ ಕಾರ್ಯನಿರತ ಪತ್ರಕರ್ತರ ಧ್ವನಿ ಹುಟ್ಟಿಕೊಂಡಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಪತ್ರಕರ್ತನು ನಿರ್ಭೀತಿಯಿಂದ ವರದಿಯನ್ನು ಮಾಡುವಂತಾಗಲಿ ಎನ್ನುವುದು ಸಾರ್ವಜನಿಕರ ಮಾತಾಗಿದೆ.
ನೂತನವಾಗಿ ಆಯ್ಕೆಯಾದ ಭಟ್ಕಳ ತಾಲೂಕ ಪದಾಧಿಕಾರಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕರಾವಳಿ ಕರ್ನಾಟಕದ ವಿಭಾಗದ ಅಧ್ಯಕ್ಷ ಕುಮಾರ. ನಾಯ್ಕ್ ಮತ್ತು ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ್ ಅರ್ಜುನ್ ದೈವಜ್ಞ ಮುಂಡಗೋಡ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
