ಒಂದು ಕೋಮಿನ ಆಡಳಿತ ಚುಕ್ಕಾಣಿ ಹಿಡಿಯಲು ಅನುಕೂಲವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ್ ಎಸ್ ವೈದ್ಯರು ತರಾತುರಿಯಲ್ಲಿ ನಗರಸಭೆ ಪ್ರಸ್ತಾವನೆ: ಎನ್ ಎಸ್ ಹೆಗಡೆ

Share

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಭಟ್ಕಳ ಪುರಸಭೆಯ ಗಡಿಗೆ ಹೊಂದಿಕೊಂಡು ಹೆಚ್ಚಿನ ಜನಸಾಂದ್ರತೆ, ಹೆಚ್ಚಿನ ಸಂಖ್ಯೆಯ ವಾಣಿಜ್ಯ ಸಂಕೀರ್ಣ, ಹೆಚ್ಚಿನ ಆದಾಯಮೂಲ, ಅಭಿವೃದ್ಧಿ ಹೊಂದಿದ ಮೂಲಭೂತ ಸೌಕರ್ಯ, ಕೈಗಾರಿಕಾ ವಸಾಹತು ಹಾಗೂ ಮೀನುಗಾರಿಕಾ ಬಂದರು ಮತ್ತು ಉದ್ಯಮಗಳು, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ನಿಲ್ದಾಣಗಳಿರುವ ಮುಟ್ಟಳ್ಳಿ, ಯಲ್ವಡಿಕವೂರ, ಮುಂಡಳಿ, ಮಾವಿನಕುರ್ವಾ, ಶಿರಾಲಿ ಗ್ರಾಮ ಪಂಚಾಯತ್ ನ ಹಲವು ಗ್ರಾಮಗಳು ನಗರಸಭೆಗೆ ಸೇರ್ಪಡಿಸಲು ಭೌಗೋಳಿಕವಾಗಿ ಹಾಗೂ ವೈಜ್ಞಾನಿಕವಾಗಿ ಅರ್ಹತೆ ಹೊಂದಿರುತ್ತದೆ.

ಈ ಮೇಲಿನ ಗ್ರಾಮಗಳನ್ನು ಪರಿಗಣಿಸದೇ ಕೇವಲ ಅಲ್ಪಸಂಖ್ಯಾತರ ಬಾಹುಳ್ಯದ ಭಟ್ಕಳ ಪುರಸಭೆ, ಜಾಲಿ ಪಟ್ಟಣ ಜೊತೆಗೆ ಅತೀ ಹೆಚ್ಚು ಕೃಷಿ ಭೂಮಿ ಹೊಂದಿರುವ ಸಂಪೂರ್ಣ ಹೆಬಳೆ ಗ್ರಾಮ ಪಂಚಾಯತಿಯನ್ನು ಸೇರಿಸಿ ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೇ ಹಾಗೂ ಸಾಮಾಜಿಕ ನ್ಯಾಯವನ್ನು ಪರಿಗಣಿಸದೇ ಒಂದು ಕೋಮಿನ ಆಡಳಿತ ಚುಕ್ಕಾಣಿ ಹಿಡಿಯಲು ಅನುಕೂಲವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ್ ಎಸ್ ವೈದ್ಯರು ತರಾತುರಿಯಲ್ಲಿ ನಗರಸಭೆ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿರುವ ಬಗ್ಗೆ ಮಾಹಿತಿ ನೀಡಲು ಜಿಲ್ಲಾಧ್ಯಕ್ಷರಾದ ಶ್ರೀ ಎನ್ ಎಸ್ ಹೆಗಡೆಯವರ ನೇತೃತ್ವದಲ್ಲಿ ಮಾಜಿ ಸಚಿವರಾದ ಶ್ರೀ ಶಿವಾನಂದ ನಾಯ್ಕ, ಮಾಜಿ ಶಾಸಕರಾದ ಶ್ರೀ ಸುನೀಲ್ ನಾಯ್ಕ, ಪಶ್ಚಿಮ ಘಟ್ಟ ಕಾರ್ಯಪಡೆ ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಸುಬ್ರಾಯ ದೇವಡಿಗ ಮತ್ತು ಶ್ರೀ ಶ್ರೀಕಾಂತ ನಾಯ್ಕ, ಭಟ್ಕಳ ಮಂಡಲಾಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀನಿವಾಸ ನಾಯ್ಕ ಹಾಗೂ ಮಂಡಲ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಉಮೇಶ ನಾಯ್ಕ ಇವರನ್ನೊಳಗೊಂಡ ನಿಯೋಗವು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಅವರನ್ನು ಬೇಟಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ನೀಡಿ ಕೂಲಂಕುಷವಾಗಿ ಚರ್ಚಿಸಿದರು.

ಅಧಿವೇಶನದಲ್ಲಿ ಪ್ರಸ್ತುತ ನಗರಸಭೆಯ ಅವೈಜ್ಞಾನಿಕ ಪ್ರಸ್ತಾವನೆಯನ್ನು ತಡೆ ಹಿಡಿದು, ಸಾಮಾಜಿಕ ನ್ಯಾಯದೊಂದಿಗೆ ಮರುಪರಿಶೀಲಿಸಿ, ವೈಜ್ಞಾನಿಕವಾಗಿ ಸಮಗ್ರ ಪ್ರಾದೇಶಿಕ ಅಧ್ಯಯನ ಮಾಡಿ, ಈ ಮೇಲೆ ಪ್ರಸ್ತಾಪಿಸಲಾದ 5 ಗ್ರಾಮ ಪಂಚಾಯತಿಗಳಲ್ಲಿ ನಗರಸಭೆಗೆ ಸೇರಲು ಅರ್ಹತೆ ಹೊಂದಿರುವ ಗ್ರಾಮಗಳನ್ನು ಸೇರಿಸಿ ಹೊಸದಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಮನವರಿಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!