ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತನ್ನು ಭಟ್ಕಳ ನಗರ ಸಭೆಗೆ ಸೇರಿಸ ವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ವಿರೋದಿಸಿ ಹೆಬ್ಳೆ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ್ ಸದಸ್ಯರನ್ನೊಳಗೊಂಡಂತೆ ಮುಖ್ಯಮಂತ್ರಿ ಹಾಗು ರಾಜ್ಯಪಾಲರು ಸೇರಿದಂತೆ ವಿವಿದ ಜನಪ್ರತಿನಿದಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು
ಮನವಿಗೆ ಸಂಬಂದಿಸಿದಂತೆ ಬಂಧಪಟ್ಟಂತೆ ಸಭೆ ದಿನಾಂಕ 07-08-2025 ರ ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಸಭೆಯಲ್ಲಿ ಭಟ್ಕಳ ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯಲ್ಲಿ ಹೆಬಳೆ ಗ್ರಾಮ ಪಂಚಾಯತನ್ನು ಸೇರಿಸುವುದನ್ನು ಹೆಬಳೆ ಗ್ರಾಮ ಪಂಚಾಯತ ಸದಸ್ಯರುಗಳು ಹಾಗೂ ಗ್ರಾಮಸ್ಥರು ತೀವೃವಾಗಿ ವಿರೋಧಿಸುತ್ತಿದ್ದು
ಹೆಬಳೆ ಗ್ರಾಮ ಪಂಚಾಯತ ಈಗಲೂ ಶೆ 50% ಕ್ಕಿಂತ ಕೃಷಿ ಜಮೀನನ್ನು ಹೊಂದಿ :, 90 % ಗ್ರಾಮಸ್ಥರು ಕೃಷಿ ಕೂಲಿ ಮತ್ತು ಮೀನುಗಾರಿಕಾ ಕಾರ್ಮಿಕರಾಗಿರುತ್ತಾರೆ. ಭಟ್ಕಳದಿಂದ ಸುಮಾರ 9 ಕಿ.ಮೀ ದೂರದಲ್ಲಿದೆ.
ಸಾವಿರಾರು ವಿದ್ಯಾರ್ಥಿಗಳ ಗ್ರಾಮೀಣ ಕೃಪಾಂಕವೂ ಇದರಿಂದ ರದ್ದಾಗಿ ಅವರ ಶಿಕ್ಷಣ ಮೇಲೆ ಪ್ರಭಾವ ಬೀರಲಿದೆ. ಬಡಕಾರ್ಮಿಕರ ಮನೆ ಟ್ಯಾಕ್ಸ್, ವಿದ್ಯುತ್, ನೀರು ಮತ್ತು ಇನ್ನಿತರ ಕರಗಳು : ದುಪ್ಪಟ್ಟಾಗಿ ದುಸ್ತರವಾಗಲಿದೆ.
ಭಟ್ಕಳ ಪುರಸಭೆಗೆ ಕೂಗಳತೆಯ ದೂರದಲ್ಲಿರುವ ಗ್ರಾಮ ಪಂಚಾಯತನ್ನು ಬಿಟ್ಟು ಹೆಬಳೆ ಪಂಚಾಯತನ್ನು ಪಂಚಾಯತ ಸಾಮಾನ್ಯ ಸಭೆಯ ತೀರ್ಮಾನದ ವಿರುದ್ಧವಾಗಿ ಹಾಗೂ ಸ್ಥಳೀಯ ಜನಾಭಿಪ್ರಾಯದ ವಿರುದ್ಧವಾಗಿ ನಮ್ಮ ಹೆಬಳೆ ಗ್ರಾಮ ಪಂಚಾಯತನ್ನು ನಗರಸಭೆಗೆ ಸೆ ರಿಸಿರುವ ಪ್ರಸ್ತಾವನೆಗೆ ನಮ್ಮ ಹೆಬಳೆ ಗ್ರಾಮ ಪಂಚಾಯತನ ಸಾರ್ವಜನಿಕರ ವಿರೋಧವಿದೆ. ಆದ್ದರಿಂದ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಸರ್ಕಾರ ತೆಗೆದುಕೊಂಡ ಈ ಪ್ರಸ್ತಾವನೇ ಯನ್ನು ಕೈ ಬಿಡುವಂತೆ ಸೂಚಿಸಬೇಕೆಂದು ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು
ಈ ಸಂದರ್ಬದಲ್ಲಿ ಸುಬ್ರಾಯ ನಾಗಪ್ಪ ದೇವಾಡಿಗ , ಚಂದ್ರ ಸೊಮಯ್ಯ ಗೊಂಡ, ಈರಪ್ಪ ನಾಗಪ್ಪ ನಾಯ್ಕ, ರಾಮ ಗೋವಿಂದ ನಾಯ್ಕ ವೆಂಕಟೇಶ ನಾಯ್ಕ ಹಾಗು ಇನ್ನಿತರರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ
