
ಮೀನುಗಾರರ ಸಂಕಷ್ಟಕ್ಕೆ ನಾನು ಯಾವತ್ತು ನೆರವಿಗೆ ನಿಲ್ಲುತ್ತೆನೆ: ಸಚಿವ ವೈದ್ಯ
ಭಟ್ಕಳ :ತಾಲೂಕಿನ ಅಳ್ವೆಕೋಡಿ ಬಂದರಿನಿಂದ ಜುಲೈ 30ರಂದು ಮಧ್ಯಾಹ್ನ 3 ಘಂಟೆ ಸುಮಾರಿಗೆ ಮೀನುಗಾರಿಕೆಗೆ ತೆರಳಿದ್ದ ಗಿಲ್ ನೆಟ್ ದೋಣಿಯೊಂದು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದ ಕಾರಣ ದುರ್ಮರಣಕ್ಕೆ ಈಡಾಗಿದ್ದ 4 ಜನ ಮೀನುಗಾರರ ಕುಟುಂಬಕ್ಕೆ ತಲಾ ೧೦ ಲಕ್ಷದಂತೆ ಒಟ್ಟು 40 ಲಕ್ಷ ಪರಿಹಾರವನ್ನು ಸಚಿವ ಮಂಕಾಳು ವೈದ್ಯರು ನೀಡಿದ್ದರು
ಮೀನುಗಾರಿಕೆಗೆ ತೆರಳಿದ್ದ ಗಿಲ್ ನೆಟ್ ದೋಣಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿತ್ತು ದೋಣಿಯಲ್ಲಿದ್ದ 6 ಜನ ಮೀನುಗಾರರು ನೀರುಪಾಲಗಿದ್ದು ಅದೃಷ್ಟವಶಾತ್ 2 ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. 4 ಜನ ಮೀನುಗಾರರು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ನಾಲ್ಕು ಜನ ಮೀನುಗಾರರ ಪೈಕಿ ಇಬ್ಬರ ಮೃತ ದೇಹ ಸಿಕ್ಕಿದ್ದು ಇನ್ನಿಬ್ಬರ ಮೀನುಗಾರರ ಸುಳಿವು ಇಲ್ಲಿ ತನಕ ಸಿಕ್ಕಿಲ್ಲ .
ಮೃತ ಮೀನುಗಾರರಾದ ಜಾಲಿ ನಿವಾಸಿ ರಾಮಕೃಷ್ಣ ಮೊಗೇರ, ಅಳ್ವೆಕೋಡಿ ಗಣೇಶ್ ಮೊಗೇರ ಹಾಗೂ ನಾಪತ್ತೆಯಾದ ಸಣಬಾವಿ ನಿವಾಸಿ ಸತೀಶ್ ಮೊಗೇರ ಮುರುಡೇಶ್ವರ ನಿವಾಸಿ ನಿಶಿತ್ ಮೊಗೇರ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಮೃತ ಮೀನುಗಾರರ ಕುಟುಂಬಗಳಿಗೆ ಮೀನುಗಾರಿಕೆ ಸಂಕಷ್ಟ ಪರಿಹಾರ ನಿಧಿಯಿಂದ ತಲಾ ₹10 ಲಕ್ಷ ರೂಪಾಯಿ ಪರಿಹಾರದ ಚೆಕ್‘ನ್ನು ಕುಟುಂಬದ ಸದಸ್ಯರಿಗೆ ಸಚಿವರು ಹಸ್ತಾಂತರಿಸಿದರು ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು . ಹಾಗೂ ಹಾನಿಯಾದ ದೋಣಿ ಮಾಲೀಕರಿಗೂ ಕೂಡಾ ₹4 ಲಕ್ಷದ 50 ಸಾವಿರ ರೂಪಾಯಿ ಹಣವನ್ನು ದೋಣಿ ಮಾಲೀಕರಾದ ಮನೋಹರ ಮೊಗೇರ ಅವರಿಗೆ ವಿತರಿಸಿಲಾಯಿತು.
ಈ ಸಂಧರ್ಭದಲ್ಲಿ ಮೀನುಗಾರಿಕಾ ಸಹಾಯಕ ನಿರ್ದೇಶಕರು ಹಾಗೂ ಸ್ಥಳೀಯ ಮೀನುಗಾರ ಮುಖಂಡರು ಪಕ್ಷದ ಕಾರ್ಯಕರ್ತರು ಜೊತೆಯಾಗಿದ್ದರು.
ಈ ಬಗ್ಗೆ ಸಚಿವರು ಮಾತನಾಡಿ ಈ ಹಿಂದೆ ಯಾವ ಸರಕಾರವು ಕುಡಾ ನಾಪತ್ತೆಯಾದ ಮೀನುಗಾರರಿಗೆ ಪರಿಹಾರ ನೀಡಿ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರ ಕುಟುಂಬದ ಕಣ್ಣೀರು ಒರೆಸೋ ಕೆಲಸ ಮಾಡಿರಲಿಲ್ಲ. ಆದರೆ ನಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ನೇತೃತ್ವದ ನಮ್ಮ ಸರಕಾರ ಮೀನುಗಾರ ಸಂಕಷ್ಟ ಪರಿಹಾರ ನಿಧಿ ಹಣವನ್ನು ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೂ ಕೂಡಾ ಪರಿಹಾರ ನೀಡುವಲ್ಲಿ ಯಶಸ್ವೀಯಾಗಿದೆ. ನಮ್ಮ ಸರಕಾರ ನಮ್ಮ ಮೀನುಗಾರಿಕೆ ಇಲಾಖೆ ಮುಖ್ಯವಾಗಿ ನಾನು ಸದಾ ಮೀನುಗಾರರ ಬೆನ್ನೆಲುಬಾಗಿ ನಿಂತು ಅವರ ಕುಟುಂಬಗಳಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ. ಎಂದು ಹೇಳಿದರು.
ವರದಿ: ಉಲ್ಲಾಸ್ ಶಾನ್ ಬಾಗ ಶಿರಾಲಿ
