ಭಟ್ಕಳ : ತಾಲೂಕಿನ ರಂಗ ಕಲಾವಿದ ಅಶೋಕ ಮಹಾಲೆಯವರ ರಂಗಕಲಾ ಸೇವೆಯನ್ನು ಗುರುತಿಸಿ ವಿಶ್ವದರ್ಶನ ದಿನ ಪತ್ರಿಕೆಯ ಐದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶ್ವ ಕನ್ನಡ ಕಲಾ ಚಕ್ರವರ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ತಾಲೂಕಿನ ರಂಗಭೂಮಿ ಕಲಾವಿದ ಅಶೋಕ ಮಹಾಲೆಯವರು ಸತತ 50 ವರ್ಷಗಳಿಂದ ರಂಗಭೂಮಿಯ ಸೇವೆಯನ್ನು ನಿಷ್ಟೆಯಿಂದ ಮಾಡಿಕೊಂಡು ಬರುತ್ತಿದ್ದಾರೆ ಅಸಂಖ್ಯ ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಿದ್ದು ಇದನ್ನು ಗುರುತಿಸಿದ ಹುಬ್ಬಳ್ಳಿ ಮೂಲದ ವಿಶ್ವ ದರ್ಶನ ಎಂಬ ದಿನ ಪತ್ರಿಕೆಯ ವತಿಯಿಂದ ವಿಶ್ವ ಕನ್ನಡ ಕಲಾ ಚಕ್ರವರ್ತಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ಈ ಬಗ್ಗೆ ಅಶೋಕ ಮಹಾಲೆಯವರು ಮಾತನಾಡಿ ನಾನು ರಂಗಭೂಮಿಯಲ್ಲಿ ಸತತ 50 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ನನ್ನ ವಿಶ್ವದರ್ಶನ ಪತ್ರಿಕಾ ಸಂಪಾದಕರಾದ ಎಸ್ ಎಸ್ ಪಾಟಿಲ್ ಅವರು ನನಗೆ ವಿಶ್ವ ಕನ್ನಡ ಕಲಾ ಚಕ್ರವರ್ತಿ ಬಿರುದಿನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ ಇದ್ದಕ್ಕೆ ನಾನು ಅವರಿಗೆ ಧನ್ಯವಾದವನ್ನು ಅರ್ಪಿಸುತ್ತಿದ್ದೆನೆ ಮುಂದಿನ ದಿನದಲ್ಲಿ ಆ ಕಲಾ ಸರಸ್ವತಿಯ ಸೇವೆಯನ್ನು ನಿರಂತರವಾಗಿ ಮಾಡುತ್ತೆನೆ ಎಂದು ಹೇಳಿದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ
ಭಟ್ಕಳ ರಂಗಭೂಮಿ ಕಲಾವಿದ ಅಶೋಕ ಮಹಾಲೆ ಅವರಿಗೆ ವಿಶ್ವ ಕನ್ನಡ ಕಲಾ ಚಕ್ರವರ್ತಿ ಬಿರುದು
