ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಆರಾಧ್ಯ ದೈವ ಗ್ರಾಮದೇವತೆ ಶ್ರೀ ಊರಮ್ಮದೇವಿಗೆ , ಜು 25ರಂದು ಮೊದಲ ಶ್ರಾವಣ ಶುಕ್ರವಾರ ನಿಮಿತ್ತ. ಅರ್ಚಕರಾದ ಬಡಿಗೇರ ನಾಗರಾಜ ಹಾಗೂ ಬಡಿಗೇರ ಈರಣ್ಣ ರವರು , ವಿಶೇಷ ಅಲಂಕಾರ ಸೇವೆಯೊಂದಿಗೆ ಪೂಜೆಗೈದಿದ್ದರು. ಬೆಳ್ಳಂಬೆಳಿಗ್ಗೆಯಿಂದಲೇ ಪಟ್ಟಣದ ಮೂಲೆ ಮೂಲೆಯಿಂದ , ಹಾಗೂ ಪಟ್ಟಣದ ನೆರೆ ಹೊರೆಯ ಗ್ರಾಮಗಳಿಂದ ವಿವುದೆಡೆಗಳಿಂದ. ಶ್ರೀಊರಮ್ಮದೇವಿ ದರ್ಶನಕ್ಕಾಗಿ , ದೇವಿಯ ದರ್ಶನಕ್ಕಾಗಿ ಅಗಮಿಸಿದ ಅಸಂಖ್ಯಾತ ಭಕ್ತರು. ಶ್ರೀಊರಮ್ಮ ದೇವಿ ದರ್ಶನ ಪಡೆದು ಕೃತಾರ್ಥರಾದರು , ಅಂತೆಯೇ ಪಟ್ಟಣದ ಆಜಾದ್ ನಗರ ವಾಸಿಗಳು. ಶಿಳ್ಳೇಖ್ಯಾತರ ಕ್ಷೇಮಾಭಿವೃದ್ಧಿ ಮಹಿಳಾ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರು , ಪಟ್ಟಣದ ಬೀದಿಬದಿಯ ಹಣ್ಣು ವ್ಯಾಪಾರಿಗಳು , ಹಾಗೂ ತೊಗಲು ಗೊಂಬೆ ಕಲಾವಿದರಾದ ಶ್ರೀಮತಿ ಗೌರಮ್ಮ ಮಹಂತೇಶ ಶಿಂಧೆಯವರು. ತಮ್ಮ ಪುತ್ರ ಯುವ ಗಾಯಕರಾದ , ಮಂಜುನಾಥ ಶಿಂಧೆ ಮತ್ತು ಅವರ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಅಗಮಿಸಿ. ಶ್ರೀಊರಮ್ಮ ದೇವಿ ದರ್ಶನ ಪಡೆದು , ದೇವಿಯ ಕೃಪೆಗೆ ಪಾತ್ರರಾದರು.
ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ