
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಲ್ಕು ಜನ ಮೀನುಗಾರರು ನಾಪತ್ತೆಯಾಗಿ ಇಬ್ಬರು ಮೀನಿಗಾರರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal) ತಾಲೂಕಿನ ತೆಂಗಿನಗುಂಡಿ ಬಳಿ ನಡೆದಿದೆ.ಭಟ್ಕಳದ ಮಾಸತಿ ಗ್ರಿಲ್ ನೆಟ್ ಹೆಸರಿನ ದೋಣಿಯಲ್ಲಿ 6 ಜನ ಮೀನುಗಾರರು ಭಟ್ಕಳದ ತೆಂಗಿನಗುಂಡಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು,ಅಲೆಗಳ ಹೊಡೆತಕ್ಕೆ ದೋಣಿ ಮಗಚಿ ಆರುಜನ ನೀರುಪಾಲಾಗಿದ್ದರು. ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು ,ನಾಲ್ಕು ಜನ ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.
ಭಟ್ಕಳದ ಮನೋಹರ ಈರಯ್ಯ ಮೊಗೇರ( 31)ಬೆಳೆ ಬಂದರ್ ನ ಜಾಲಿ ರಾಮ ಮಾಸ್ತಿ ಖಾರ್ವಿ (43 )ರಕ್ಷಣೆಗೊಳಗಾದವರು .
ಇನ್ನು ಜಾಲಿ ಕೋಡಿಯ ರಾಮಕೃಷ್ಣ ಮಂಜು ಮೊಗೇರ( 40) ಜಾಲಿ ಕೊಡಿ,ಅಳ್ವೆಕೋಡಿಯ ಸತೀಶ್ ತಿಮ್ಮಪ್ಪ ಮೊಗೇರ (26),ಗಣೇಶ್ ಮಂಜುನಾಥ ಮೊಗೇರ 27 ಅಳ್ವೇಕೋಡಿಮುಗ್ರಿ ಮನೆಯ ಕನ್ನಡ ಶಾಲೆಯ ನಿಶ್ಚಿತ ಮೊಗೇರ( 30 )ಈ ನಾಲ್ಕು ಜನ ನಾಪತ್ತೆಯಾದವರಾಗಿದ್ದಾರೆ.ಕರಾವಳಿ ಕಾವಲು ಪಡೆ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದ್ದು,ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.