ಇತಿಹಾಸ ಪ್ರಸಿದ್ಧ ಗ್ರಾಮ ದೇವಿಯಾದ ಮಾರಿಕಾಂಬಾದೇವಿ ಮೂರ್ತಿಯನ್ನು ಭಟ್ಕಳದ ಜಾಲಿ ಕೋಡಿಯ ಕಡಲ ಕಿನಾರೆಯಲ್ಲಿ ಸಾವಿರಾರು ಭಕ್ತರ ಜಯ ಘೋಷದೊಂದಿಗೆ ವಿಸರ್ಜಿಸುವ ಮೂಲಕ ಎರಡು ದಿನದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು
ವಿಸರ್ಜನಾ ಮೆರವಣಿಗೆ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಗ್ರಾಮಸ್ಥರು ದೇವಿಯ ದರ್ಶನ ಪಡೆದು ಪುನೀತರಾದರು ಜಾಲಿ ಕೋಡಿಯ ಸಮುದ್ರ ಕಿನಾರೆಯಲ್ಲಿ ಈ ಬಾರಿ ವಿಶೇಷವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದಂತೆ ಸಾರ್ವಜನಿಕರು ಸಮುದ್ರದಲ್ಲಿ ಇಳಿಯದಂತೆ ಹಗ್ಗ ಅಡ್ಡಗಟ್ಟಿ ಹಾಕಿ ಭಕ್ತಾದಿಗಳ ಮುಂಜಾಗ್ರತವಾಗಿ ಬಂದೋಬಸ್ತ್ ನೀಡಿದ್ದು ಜೊತೆಗೆ ವಿಪತ್ತು ನಿರ್ವಹಣಾ ಪಡೆಯ ಶೌರ್ಯತಂಡದ 40 ಸದಸ್ಯರು ಹಾಗೂ ಕರಾವಳಿ ಪೊಲೀಸ್ ಪಡೆ ಜಾತ್ರಾ ಮಹೋತ್ಸವದ ಸೇವಾ ಕಾರ್ಯಕರ್ತರು ವಿಶೇಷವಾಗಿ ಕೈಜೋಡಿಸಿದ್ದರು ದೇವಿಯ ವಿಸರ್ಜನಾ ಮೆರವಣಿಗೆ ಮುಗಿಸಿ ಪುನಃ ಮರಳಿ ಬರುವವರಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿತ್ತು
ವರದಿ: ಉಲ್ಲಾಸ ಶ್ಯಾನ ಭಾಗ ಶಿರಾಲಿ
ಭಟ್ಕಳ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಸಂಪನ್ನ
