ಮೈಸೂರಿನ ಯೂತ್ ಎಫರ್ಟ್ಸ್ ಫಾರ್ ಸೊಸೈಟಿ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ಶೈಕ್ಷಣಿಕ ಪ್ರಶಸ್ತಿ2025 ಪ್ರಧಾನ ಸಮಾರಂಭದಲ್ಲಿ ಡಾಕ್ಟರ್ ಭಾಗಿರತಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಸ್ತುತ ಇವರು ಕುಂದಾಪುರದ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ 2009ರಲ್ಲಿ ಭಟ್ಕಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ಆರಂಭಿಸಿದ ಇವರು ಬಳಿಕ ಮೂರು ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ
ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಟ್ಕಳದ ಕಾಲೇಜನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಶ್ರಮಿಸಿದ ಇವರು ಕಾಲೇಜಿಗೆNAAC ಮೌಲ್ಯಮಾಪನದಲ್ಲಿB++ ಶ್ರೇಣಿಯನ್ನು ತಂದು ಕೊಡುವಲ್ಲಿ ಪ್ರಮುಖ ಪಾತ್ರ ಇವರದ್ದಾಗಿದೆ 13 ವರ್ಷಗಳು ಭಟ್ಕಳದಲ್ಲಿ ಸೇವೆ ಸಲ್ಲಿಸಿದ ಬಳಿಕ ಕುಂದಾಪುರದ ಕೋಟೇಶ್ವರ ಕಾಲೇಜಿಗೆ 2 ಫೆಬ್ರವರಿ 2023ರಲ್ಲಿ ವರ್ಗಾಯಿತರಾಗಿರುತ್ತಾರೆ
ಇವರ ಈ ಸಾಧನೆಗೆ ಭಟ್ಕಳದ ನಾಗರಿಕರು ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿ ಬಳಗ ಅಭಿನಂದನೆ ಸಲ್ಲಿಸಿರುತ್ತಾರೆ
ವರದಿ ಉಲ್ಲಾಸ್ ಶಾನಭಾಗ ಶಿರಾಲಿ
ಭಟ್ಕಳದ ಡಾಕ್ಟರ್ ಭಾಗಿರತಿ ನಾಯ್ಕ್ ಅವರಿಗೆ ರಾಜ್ಯಶಾಸ್ತ್ರದಲ್ಲಿ ಅತ್ಯುತ್ತಮ ಅಸೋಸಿಯೆಟ್ ಪ್ರೊಫೆಸರ್ ಪ್ರಶಸ್ತಿ.
