ಮೀನುಗಾರಿಕೆ ತೆರಳಿದ ಸಂದರ್ಭದಲ್ಲಿದುರ್ಮರಣಕ್ಕೆ ಈಡಾದ ಮೀನುಗಾರನ ಕುಟುಂಬಕ್ಕೆ 10 ಲಕ್ಷ ಚೆಕ್ ವಿತರಿಸಿದ ಸಚಿವ ಮಂಕಾಳು ವೈದ್ಯ
ರಾಜ್ಯದ ಮೀನುಗಾರ ಸಮಾಜಕ್ಕೆ ವರದಾನವಾಗಿರುವ ಸಚಿವ ಮಂಕಾಳು ವೈದ್ಯ
ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿನುಗಾರರಾದ ಮಾದೇವ ಗೊವಿಂದ ಮೊಗೇರ್ ಅವರು ಸೊಡಿಗದ್ದೆ ಮೊಗೇರ್‌ಕೇರಿಯ ಕಡಲತಡಿಯಿಂದ ಮೀನುಗಾರಿಕೆಗೆ ತೆರಳಿದ ಸಂದರ್ಬದಲ್ಲಿ ಸಮುದ್ರ ಪಾಲಾಗಿ ದುರ್ಮರಣಕ್ಕೆ ಈಡಾದರೂ ಈ ಹಿನ್ನೆಲೆಯಲ್ಲಿ ಸಚಿವ ಮಂಕಾಳು ವೈದ್ಯರು ಮೃತ ಮೀನುಗಾರನ ಕುಟುಂಬಕ್ಕೆ 10 ಲಕ್ಷ ಪರಿಹಾರ ಚೆಕ್ ವಿತರಿಸಿ ಮೃತ ಕುಟುಂಬಸ್ಥ ರಿಗೆ ದೈರ್ಯ ತುಂಬಿದರು.
ಮೀನುಗಾರಿಕೆ ವೃತ್ತಿ ಎಂದರೆ ಒಂದು ಬಗೆಯ ಚಾಲೆಂಜಿಂಗ್ ಕೆಲಸವಾಗಿದ್ದು ಮೀನುಗಾರರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ವೃತ್ತಿಯನ್ನು ಮಾಡುತ್ತಾರೆ ಹಿಂದೆ ಮೀನುಗಾರರು ತಮ್ಮ ವೃತ್ತಿಯನ್ನು ಮಾಡುವ ಸಂದರ್ಭದಲ್ಲಿ ದುರ್ಮರಣಕ್ಕೆ ಈಡಾದರೆ ಅವರನ್ನು ಯಾರು ಕೇಳುವವರೆ ಇಲ್ಲವಾಗಿತ್ತು ಸರಕಾರ ಆ ಕುಟುಂಬಕ್ಕೆ ಪುಡಿಗಾಸನ್ನು ಪರಿಹಾರದ ರೂಪದಲ್ಲಿ ನೀಡಿ ಕಣ್ಣೋರೆಸುವ ಕೆಲಸವನ್ನು ಮಾಡಿ ಕೈತೊಳೆದುಕೊಳ್ಳುತ್ತಿತ್ತು ಆದರೆ ಈಗ ಸಚಿವ ಮಂಕಾಳು ವೈದ್ಯರು ಮೀನುಗಾರಿಕ ಸಚಿವರಾದಾಗಿನಿಂದ ಮೀನುಗಾರ ಸಮಾಜಕ್ಕೆ ಆನೆ ಬಲಬಂದಂತಾಗಿದೆ.
ಮೀನುಗಾರಿಕಾ ವೃತ್ತಿ ಮಾಡುವ ಸಂದರ್ಭದಲ್ಲಿ ಮೀನುಗಾರರು ದುರ್ಮರಣಕ್ಕೆ ಈಡಾದ ಅವರ ಕುಟುಂಬಕ್ಕೆ ೧೦ ಲಕ್ಷ ಪರಿಹಾರ ಧನವನ್ನು ಸಚಿವರು ನಿಗದಿ ಮಾಡಿದ್ದಾರೆ . ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾದೇವ ಗೋವಿಂದ ಮೊಗೇರ್ ಅವರು ಮೊಗೇರಕೇರಿ ಕಡಲ ತಡಿಯಿಂದ ಮೀನುಗಾರಿಕೆಗೆ ತೆರಳಿರುವ ಸಂದರ್ಭ ದುರ್ಮರಣಕ್ಕೆ ಈಡಾಗಿದ್ದರು ಈ ಹಿನ್ನೆಲೆಯಲ್ಲಿ ಸಚಿವ ಮಂಕಾಳು ವೈದ್ಯರು ಮೃತರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರದ ಚೆಕ್ ಅನ್ನು ವಿತರಿಸಿ ಕುಟುಂಬಕ್ಕೆ ದೈರ್ಯವನ್ನು ತುಂಬಿದರು
ಈ ಸಂದರ್ಭದಲ್ಲಿ ಸಚಿವ ವೈದ್ಯರು ಮಾತನಾಡಿ ಮೀನುಗಾರ ಬಂದುಗಳು ಯಾವುದೆ ಕಾರಣಕ್ಕೂ ದೈರ್ಯಗುಂದುವ ಅವಶ್ಯಕತೆ ಇಲ್ಲ ನಾನು ಮೀನುಗಾರ ಸಮಾಜದ ಹಿಂದೆ ಯಾವಾಗಲು ಇರುತ್ತೆನೆ ಇಲ್ಲಿ ಈ ಕುಟುಂಬ ಮನೆಯ ಯಜಮಾನನ್ನು ಕಳೆದುಕೊಂಡಿದೆ ಆ ಕುಟುಂಬಕ್ಕೆ ಆ ಭಗವಂತ ದುಖ: ಸಹಿಸುವ ಶಕ್ತಿಯನ್ನು ನೀಡಲಿ ನನ್ನಿಂದ ಈ ಕುಟುಂಬಕ್ಕೆ ಮುಂದೆ ಯಾವುದೆ ಸಹಾಯ ಸಹಕಾರ ಬೇಕಾದರು ನನ್ನ ಸಂಪರ್ಕಿಸಿದರೆ ನಾನು ಸಹಾಯವನ್ನು ನೀಡುತ್ತೆನೆ ಒಟ್ಟಾರೆ ನನ್ನ ಮೀನುಗಾರ ಸಮಾಜಕ್ಕೆ ಯಾವುದೆ ಕಷ್ಟಕಾರ್ಪಣ್ಯಗಳು ಬಂದರು ನಾನು ಪರಿಹಾರಕ್ಕಾಗಿ ಕೆಲಸಮಾಡುತ್ತೆನೆ ಎಂದು ಹೇಳಿದರು
ಈ ಸಂದರ್ಬದಲ್ಲಿ ಮಂಜುನಾಥ ನಾಯ್ಕ ಬೆಳ್ಕೆ , ಜಗದೀಶ ನಾಯ್ಕ ಬೆಳ್ಕೆ , ಬಾಸ್ಕರ್ ಮೊಗೇರ್ ಸೊಡಿಗದ್ದ ಶ್ರೀಧರ್ ನಾಯ್ಕ ನಾರಾಯಣ ನಾಯ್ಕ ಹಾಗು ಇನ್ನಿತರರುಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ್ ಶಿರಾಲಿ