ಭಟ್ಕಳ ತಾಲೂಕಿನ ನಾದ್ಯಂತ ಮಳೆ ಮತ್ತೆ ಅಬ್ಬರಿಸುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ
ನಿರಂತರ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಕೆಲವು ಕಡೆ ಮಳೆ ನೀರಿನಿಂದ ಜಲಾವೃತವಾಗಿವೆ ರಸ್ತೆಯಲ್ಲಿ ಸೃಷ್ಟಿಯಾಗಿರುವ ಹೋಂಡಗಳಿಂದ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದೆ.
ಭಾರಿ ಮಳೆಯ ಹಿನ್ನೆಲೆ ಬುಧವಾರ ಭಟ್ಕಳ ತಾಲೂಕಿನ ಎಲ್ಲಾ ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ ಇಂದ ಗುರುವಾರ ಬೆಳಗ್ಗಿನವರೆಗೆ 94.9 ಮಿಲಿ ಮೀಟರ್ ಮಳೆ ದಾಖಲಾಗಿದ್ದು ಇವರಗಿನ ಒಟ್ಟು ಮಳೆಯ ಪ್ರಮಾಣ 2647.7 ದಾಖಲಾಗಿರುತ್ತದೆ.
ವರದಿ ಉಲ್ಲಾಸ್ ಶಾನಭಾಗ ಶಿರಾಲಿ