ಜೋಕಾಲಿಯಲ್ಲಿ ಆಟವಾಡುತ್ತಿರುವಾಗ ಜೋಕಾಲಿಯ ಹಗ್ಗ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಬಾಲಕಿ ಒಬ್ಬಳು ಮೃತಪಟ್ಟಿರುವ ಧಾರಣ ಘಟನೆ ಭಟ್ಕಳ ತಾಲೂಕಿನ ಸಬ್ಬತಿಯ ತೇರ್ನ್ ಮಕ್ಕಿಯಲ್ಲಿ ನಡೆದಿದೆ.
7ನೇ ತರಗತಿಯಲ್ಲಿ ಓದುತ್ತಿರುವ ಪ್ರಣಿತ ಜಗನ್ನಾಥ್ ನಾಯ್ಕ್ 12 ವರ್ಷದ ಬಾಲಕಿ ಯಾಗಿದ್ದಾಳೆ ಮಳೆಯ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ತನ್ನ ಸಹೋದರಿಯೊಂದಿಗೆ ಜೋಕಾಲಿಯಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಜೋಕಾಲಿಯ ಹಗ್ಗ ಕುತ್ತಿಗೆಗೆ ಸುತ್ತಿಕೊಂಡಿದೆ ಇದರಿಂದಾಗಿ ಬಾಲಕಿಗೆ ಉಸಿರುಗಟ್ಟಿದ್ದು ತಪ್ಪಿಸಿಕೊಳ್ಳಲಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಘಟನೆಯ ಸಂದರ್ಭದಲ್ಲಿ ಮನೆಯಲ್ಲಿ ತಾಯಿಯು ಕೂಡ ಕೆಲಸಕ್ಕೆ ಹೋಗಿದ್ದರಿಂದ ಅಪಾಯದಿಂದ ತಪ್ಪಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಿ; ಉಲ್ಲಾಸ್ ಶಾನಭಾಗ ಶಿರಾಲಿ