ಭಟ್ಕಳ : ಇಲ್ಲಿನ ಪ್ರತಿಷ್ಟಿತ ಐಸಿಎಸ್‌ಇ ಪಠ್ಯ ಕ್ರಮದ
ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಸತತ ಎರಡನೇ ವರ್ಷ
ನ್ಯಾಶನಲ್‌ಸ್ಕೂಲ್ ಅವಾರ್ಡ ಸಂಸ್ಥೆಯು ನೀಡುವ ರಾಷ್ಟç
ಪ್ರಶಸ್ತಿಗೆ ಭಾಜನವಾಗಿದೆ.ಈ ಬಾರಿ ಶಾಲೆಯು “ಬೆಸ್ಟ ಸ್ಕೂಲ್
ವಿತ್ ಸ್ಟೆಮ್ ಲರ್ನಿಂಗ-೨೦೨೫” ಎನ್ನುವ ವಿಭಾಗದಲ್ಲಿ ಪ್ರಶಸ್ತಿಯನ್ನು
ಬಾಚಿಕೊಂಡಿದೆ.ಆಧುನಿಕ ತಂತ್ರಜ್ಞಾನಾಧಾರಿತ
ಪಠ್ಯಕ್ರಮದ ತರಗತಿಗಳನ್ನು ಮಕ್ಕಳಿಗೆ
ಪರಿಚಯಿಸಿ,ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ
ವಿಷಯದಲ್ಲಿ ಆವಿಷ್ಕಾರಿಯುತ
ಮನೋಭಾವನೆಯನ್ನು ಬೆಳೆಸುವ
ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಣ ಸಂಸ್ಥೆಯು
ಮಕ್ಕಳ ಭವಿಷ್ಯಕ್ಕೆ ಭದ್ರ ಭುನಾದಿಯನ್ನು
ಹಾಕಿ ಕೊಡುವಲ್ಲಿ ಸದಾ ಶ್ರಮಿಸುತ್ತಿದೆ.ಕಳೆದ
ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ
ತನ್ನದೇ ಆದ ರೊಬೋಟಿಕ್ಸ ಲ್ಯಾಬ್ ಅನ್ನು
ಪರಿಚಯಿಸಿ ಮಕ್ಕಳಿಗೆ ರೊಬೋಟಿಕ್ಸ ನ ಕುರಿತು
ಪ್ರಾಯೋಗಿಕ ತರಬೇತಿಯನ್ನು
ನಿಡುತ್ತಿರುವುದು ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆ.
ಸದಾ ಶಾಲೆಯ ಏಳಿಗೆಯಲ್ಲಿ ಬೆನ್ನೆಲುಬಾಗಿರುವ
ಪಾಲಕರು,ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಿರುವ
ಶಿಕ್ಷಕವೃಂದ,ಕೌಶಲ್ಯಯುತ ವಿದ್ಯಾರ್ಥಿಗಳು ಹಾಗೂ
ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕತೆಯನ್ನು ತರಲು
ಭದ್ಧವಾಗಿರುವ ಆಡಳಿತ ಮಂಡಳಿಯ ಕೊಡುಗೆಗಳ
ಕುರಿತು ಭಟ್ಕಳ ಎಜ್ಯುಕೇಶನ್ ಟ್ರಸ್ಟ ನ ಚೆರಮೆನ್ ಡಾ.
ಸುರೇಶ ನಾಯಕ ವಿಶೇಷವಾಗಿ ಪ್ರಶಂಸಿಸಿ ಈ ರಾಷ್ಟç
ಪುರಸ್ಕಾರದ ಶ್ರೇಯವು ಪ್ರತಿಯೊಬ್ಬರಿಗೂ
ಸಲ್ಲಬೇಕೆಂದು ಹೇಳಿದರು.
“ವಿದ್ಯಾಂಜಲಿ ಶಾಲೆಗೆ ಸತತ ೨ ನೇ ವರ್ಷರಾಷ್ಟç ಪ್ರಶಸ್ತಿಯ ಪುರಸ್ಕಾರ”
