ಸಿಂಧನೂರು : ಅಶೋಕ ನಲ್ಲ ವ್ಯಕ್ತಿಯಲ್ಲ ಸಮಾಜದ ಶಕ್ತಿ -ಮಾಜಿ ಸಚಿವ ನಾಡಗೌಡ*-
ರಾಯಚೂರು ಜಿಲ್ಲೆ ಸಿಂಧನೂರು : ಜೂನ್ ೨೯, ನಮ್ಮ ಕ್ಲಿನಿಕ್ ಹಾಗೂ ಸನ್ ರೈಸ್ ಪ್ಯಾರ ಮೆಡಿಕಲ್ ಕಾಲೇಜ್ ವತಿಯಿಂದ , ಸಮಾಜ ಸೇವಕ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟಿನ ಕರ‍್ಯರ‍್ಶಿ ಮತ್ತು ಕಾರುಣ್ಯ ಆಶ್ರಮದ ಸರ‍್ವಜನಿಕ ಸಂರ‍್ಕ ಅಧಿಕಾರಿ ಅಶೋಕ್ ನಲ್ಲ ಅವರ ೪೬ನೇ ಜನ್ಮದಿನದ ಪ್ರಯುಕ್ತ. ನಗರದ ಕಾರುಣ್ಯ ನೆಲೆ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ , ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧಿಗಳ ವಿತರಣ ಕರ‍್ಯಕ್ರಮ ನೆರವೇರಿಸಲಾಯಿತು. ಮಾಜಿ ಸಚಿವ ಹಾಗೂ ಕೆ. ಓ. ಎಫ್. ರಾಜ್ಯಾಧ್ಯಕ್ಷರಾದ ವೆಂಕಟರಾವ್ ನಾಡಗೌಡ , ಸಸಿಗೆ ನೀರು ಹಾಕುವುದರ ಮೂಲಕ ಕರ‍್ಯಕ್ರಮ ಉದ್ಘಾಟಿಸಿದರು. ನಾಡಗೌಡ ಫೌಂಡೇಶನ್ ಹಾಗೂ ಸನ್ ರೈಸ್ ಪ್ಯಾರ ಮೆಡಿಕಲ್ ಕಾಲೇಜ್ , ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಅಶೋಕ್ ನಲ್ಲ ಅವರನ್ನು ಕಾರುಣ್ಯ ಶ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ , ಅಶೋಕ್ ನಲ್ಲ ಅವರು ಜನು ಮದಿನದ ಪ್ರಯುಕ್ತ ಕಾರುಣ್ಯಶ್ರಮದಲ್ಲಿ . ವೃದ್ಧರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಉಚಿತ ಆರೋಗ್ಯ ತಪಾಸಣೆ ಔಷಧಿಗಳ ವಿತರಣೆ , ಹಾಗೂ ಸಮಾಜ ಪರ ಕರ‍್ಯಗಳು ಮಾಡುತ್ತಿದ್ದು. ನಿರಂತರ ಸಮಾಜದ ಹಿತ ಚಿಂತನೆಗಳನ್ನು ಹಂಚಿಕೊಳ್ಳುವ ಅಶೋಕ ನಲ್ಲರವರು , ಒಬ್ಬ ವ್ಯಕ್ತಿಯಲ್ಲ ಆತ ಸಮಾಜದ ಶಕ್ತಿಯಾಗಿದ್ದಾರೆ. ಅವರಿಗೆ ಮತ್ತು ಅವರ ಕುಟುಂಬಕ್ಕೆ ಭಗವಂತ ಉತ್ತಮ ಆರೋಗ್ಯ ಆಯುಷ್ಯ , ಸುಖ ಶಾಂತಿ ನೆಮ್ಮದಿಯನ್ನು ಆ ದೇವರು ಕರುಣಿಸಲಿ ಎಂದು ಪ್ರರ‍್ಥಿಸೋಣ ಎಂದರು.
ಆಶ್ರಮದ ಕರ‍್ಯಧ್ಯಕ್ಷ ಡಾ॥ ಚನ್ನಬಸಯ್ಯಸ್ವಾಮಿ ಹಿರೇಮಠ. ಸುಜಾತ ಹಿರೇಮಠ. ಪ್ಯಾರಾಮೆಡಿಕಲ್ ಕಾಲೇಜಿನ ಆಡಳಿತಧಿಕಾರಿ ರ‍್ಷಾದ್ ಅತ್ತಾರ್. ಸುರೇಶ್ ನಕ್ಕಂಟಿ. ಅವಿನಾಶ್ ದೇಶಪಾಂಡೆ. ಡಾ. ಮಣಿ ಶಂಕರ್ ಉಪಸ್ಥಿತರಿದ್ದರು. ಮೆಡಿಕಲ್ ಕಾಲೇಜಿನ ವಿದ್ಯರ‍್ಥಿಗಳು ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು.
ಅಶೋಕ ನಲ್ಲ ವ್ಯಕ್ತಿಯಲ್ಲ ಸಮಾಜದ ಶಕ್ತಿ -ಮಾಜಿ ಸಚಿವ ನಾಡಗೌಡ
