ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ

Share

ಭಟ್ಕಳ್: ಇಲ್ಲಿನ ಮುರುಡೇಶ್ವರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ೧೧ ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ಜೂನ್ ೨೧ ರಂದು ಇಲ್ಲಿನ ರೋಷನಿ ಆಡಿಟೋರಿಯಮ್‌ನಲ್ಲಿ ಆಚರಿಸಿದರು. ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕರು ಮಕ್ಕಳಿಗೆ ವಿವಿಧ ಆಸನಗಳನ್ನು ಮಾಡಿಸಿ ಯೋಗದಿಂದ ನಮ್ಮ ಶರೀರವನ್ನು ಯಾವ ರೀತಿ ಸದೃಢವಾಗಿ ಇರಿಸಿಕೊಳ್ಳಬಹುದೆಂದು ಸವಿಸ್ತಾರವಾದ ಮಾರ್ಗದರ್ಶನವನ್ನು ನೀಡಿದರು ಹಾಗೂ ಯೋಗದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ,ಆಡಳಿತ ನಿರ್ದೇಶಕಿಯಾದ ಡಾ.ಪುಷ್ಪಲತಾ ಮಂಕಾಳ್ ವೈದ್ಯರವರು ಉಪಸ್ಥಿತರಿದ್ದು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರು ಕೂಡ ಭಾಗವಸಿದ್ದರು.

Leave a Reply

Your email address will not be published. Required fields are marked *

error: Content is protected !!