ದಿನಾಂಕ: 21-06-2025 ರಂದು ಬೆಳಿಗ್ಗೆ 10 ಗಂಟೆಗೆ ಆರ್. ಎನ್. ಎಸ್ ಪ್ರಥಮ ದರ್ಜೆ
ಕಾಲೇಜಿನ ಸಭಾಂಗಣದಲ್ಲಿ ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಹಮ್ಮಿ ಕೊಳ್ಳಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮಖೇನ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯರಾದ
ಪ್ರೋ. ರವಿ ವರ್ಮರವರು ಯೋಗ ಜಗತ್ತಿನ ಎಲ್ಲಡೆ ಯುಗದ ಅಲೆಯನ್ನು ಪಸರಿಸುತ್ತಿದೆ. ಜನರ
ಆರೋಗ್ಯಕ್ಕೆ ಯೋಗ ದಿವ್ಯ ಔಷದ ಎಂದರು. ಕಂಪ್ಯೂಟರ ವಿಭಾಗದ ಮುಖ್ಯಸ್ಥರಾದ ಪ್ರೋ. ಗಣೇಶ
ನಾಯ್ಕ ಯೋಗದ ಅರಿವು ಪ್ರತಿಯೊಬ್ಬರಲ್ಲಿ ಇದ್ದಾಗ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು
ಸಾಧ್ಯ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೋ. ಗಣಪತಿ ಕಾಯ್ಕಿಣಿ
ಮಾತನಾಡಿ ವ್ಯಸನ ಮುಕ್ತ ಸಮಾಜದಿಂದ ದೇಶದ ಅಭಿವೃಧಿ ಸಾಧ್ಯ ಮನಸು ಮತ್ತು ದೇಹದ ನಡುವಿನ
ಸಾಮರಸ್ಯವನ್ನು ಸ್ಥಾಪಿಸಲು ಯೋಗ ಸಾಧನವಾಗಿದೆ. ಯೋಗ ನಮ್ಮ ಸಂಸ್ಕೃತಿ ಪರಂಪರೆ ಇದು ವಿಶ್ವಕ್ಕೆ
ಮಾದರಿ ಎಂದರು. ವೇದಿಕೆಯಲ್ಲಿ ಬಿ.ಕಾಂ ವಿಭಾಗದ ಮುಖ್ಯಸ್ಥರಾದ ಪ್ರೋ. ಅರ್ಪಿತಾ ಪ್ರಭು,ಬಿಬಿಎ
ವಿಭಾಗದ ಮುಖ್ಯಸ್ಥರಾದ. ಧನಶ್ರೀ ಕಲಭಾಗ ಹಾಜರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಕು.
ಮೇಘಾ ನಾಯ್ಕ,ಕು. ನಿತಿಕಾ ನಾಯ್ಕ ಧನ್ಯವಾದ ಸಮರ್ಪಿಸಿ , ಕುಮಾರಿ. ಅರ್ಚನಾ ನಾಯ್ಕ ಕಾರ್ಯಕ್ರಮ
ನಿರೂಪಿಸಿದಳು ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಯೋಗಾಸನ ನಡೆಸಲಾಯಿತು.
ಆರ್. ಎನ್. ಎಸ್ ಪ್ರಥಮ ದರ್ಜೆ ಕಾಲೇಜುಮುರುಡೇಶ್ವರ ರಾಷ್ಟೀಯ ಸೇವಾ ಯೋಜನಾ ಘಟಕಅಂತರಾಷ್ಟೀಯ ಯೋಗ ದಿನಾಚರಣೆ 2025
