ಮುರುಡೇಶ್ವರ : ದಿನಾಂಕ ೨೩.೦೬.೨೦೨೫ ಸೋಮವಾರದಂದು ಇಲ್ಲಿನ ಪ್ರತಿಷ್ಠಿತ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ರೋಷನಿ ಆಡಿಟೋರಿಯಮ್‌ನಲ್ಲಿ ೨೦೨೫-೨೦೨೬ ನೇ ಸಾಲಿನ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿಯಾಗಿರುವ ಡಾ. ಪುಷ್ಪಲತಾ ಮಂಕಾಳ್ ವೈದ್ಯರವರು, ವಿದ್ಯಾರ್ಥಿಗಳು ನಾಯಕತ್ವದ ಗುಣ ಬೆಳೆಸಿಕೊಂಡು ಜೀವನದಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಬೇಕೆಂದು ಉತ್ತೇಜಿಸಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀ ಹನುಮಂತ ಬೀರಾದರ್, ಪೋಲಿಸ್ ಸಬ್ ಇನ್‌ಸ್ಪೆಕ್ಟರ್ ಮುರುಡೇಶ್ವರ ಠಾಣೆ, ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಾಯಕ ಎಂದರೆ ಒಂದು ಗುಂಪಿನ ನಾಯಕತ್ವವನ್ನು ವಹಿಸಿಕೊಂಡು ಆ ಗುಂಪಿನ ಉನ್ನತಿಗಾಗಿ ಹೋರಾಡಿ ಸಾಧನೆ ಮಾಡುವವರು ಎಂದು ತಿಳಿಸಿದರು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾಗಿರುವ ಶ್ರೀ ವಿ.ಡಿ. ಮೋಗೇರ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ತಾಳ್ಮೆ, ಶಿಸ್ತು, ಸಮಯ ಪ್ರಜ್ಞೆ, ಪ್ರಾಮಾಣಿಕತೆ ಇರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೀನಾ ವೈದ್ಯ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರತೀಶ ಮಡಿವಾಳ, ಬೀನಾ ವೈದ್ಯ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಯೀಂ ಗೋರಿ ಹಾಗೂ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ನಾಯ್ಕ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಚುನಾಯಿತರಾದ ವಿದ್ಯಾರ್ಥಿ ಸಂಸತ್ತಿನ ನಾಯಕರಿಗೆ ಪದವಿ ಪ್ರಧಾನ ಮಾಡಿ ಬೀನಾ ವೈದ್ಯ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಯೀಂ ಗೋರಿಯವರು ಪ್ರತಿಜ್ಞಾ ವಿಧಿಯನ್ನು
ಬೋಧಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯಾದ ಶ್ರೀಮತಿ ಆಥಿಯಾ ನಿಖಾತ್, ಸ್ವಾಗತವನ್ನು ಶಿಕ್ಷಕಿಯಾದ ಶ್ರೀಮತಿ ಒಲಿಂಡಾ ಆರ್ ಗೋಮ್ಸ್, ವಂದನಾರ್ಪಣೆಯನ್ನು ಶಿಕ್ಷಕಿಯಾದ ಶ್ರೀಮತಿ ಕವಿತಾ ಮೊಗೇರ ರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಬೋಧಕ ಹಾಗೂ ಬೊಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಧಿಕಾರ ಪ್ರಧಾನ ಸಮಾರಂಭ
