ಭಟ್ಕಳ : ಇಲ್ಲಿನ ಐಸಿಎಸ್‌ಇ ಪಠ್ಯಕ್ರಮದ ವಿದ್ಯಾಂಜಲಿ
ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಶಾಲಾ ವಿದ್ಯಾರ್ಥಿ
ಪರಿಷತ್ ಚುನಾವಣೆಯನ್ನು ಡಿಜಿಟಲ್ ತಂತ್ರಜ್ಞಾನ
ನೆರವಿನಿAದ ನಡೆಸಲಾಯಿತು.೬ ನೆ ತರಗತಿಯಿಂದ
೧೦ ನೇ ತರಗಿವರೆಗಿನ ಮಕ್ಕಳು ತಮ್ಮ
ನೆಚ್ಚಿನ ವಿದ್ಯಾರ್ಥಿ/ವಿದ್ಯಾರ್ಥಿನಿ ನಾಯಕರನ್ನು
ಮತದಾನದ ಮೂಲಕ ಆರಿಸಿದರು.ಕಾಗದ ರಹಿತ
ಮತದಾನದ ಮೂಲಕ ಮಕ್ಕಳಲ್ಲಿ ಪರಿಸರ
ಸಂರಕ಼ಣೆಯ ಕುರಿತಾದ
ತಿಳುವಳಿಕೆಯನ್ನು ನೀಡಲಾಯಿತು.ವಿದ್ಯಾರ್ಥಿ
ನಾಯಕನಾಗಿ ಹ಼ರ್ಷಿತ್ ಮೊಗೇರ ಮತ್ತು
ವಿದ್ಯಾರ್ಥಿ ನಾಯಕಿಯಾಗಿ ನಿಷತ್ ಕೌಸರ್
ಆಯ್ಕಯಾದರು.ಶಾಲಾ ಆಡಳಿತ
ಮಂಡಳಿ,ಶಿಕ್ಷಕ ವರ್ಗದವರು ಆಯ್ಕೆಯಾದ
ಎಲ್ಲಾ ಮಕ್ಕಳಿಗೆ ಶುಭ ಹಾರೈಸಿದರು.
“ಡಿಜಿಟಲ್ ಯುಗದ ಡಿಜಿಟಲ್ ಮತದಾನ”
