ದಿನಾಂಕ 17-09-2024 ರಂದು ಬೆಳಿಗ್ಗೆ ಗಂಟೆಗೆ ಆರ್ ಎನ್ ಎಸ್ ಪ್ರಥಮ
ದರ್ಜೆ ಕಾಲೇಜು ಮತ್ತು “ರಿಪ್ ವಾಚ್” ಸಂಸ್ಥೆ ಹಾಗೂ ಎನ್ ಎಸ್ ಎಸ್ ವತಿಯಿಂದ
ಕಡಲಾಮೆ ಸಂರಕ್ಷಣಾ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ
ಮಾತನಾಡಿದ ಆರ್ ಎನ್ ಎಸ್ ಸಮೂಹ
ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ದಿನೇಶ ಗಾವಂಕರ್ ಮಾತನಾಡಿ ಪರಿಸರ ಸಂರಕ್ಷಣೆ
ನಮ್ಮ ಹೊಣೆ. ಪ್ರತಿಯೊಬ್ಬರೂ ಪ್ರಕ್ರತಿಗೆ ಪೂರಕವಾಗಿ ಬದುಕನ್ನು ಕಟ್ಟಿಕೊಂಡಾಗ
ಬದುಕು ಸಾರ್ಥಕವಾಗುತ್ತದೆ ಎಂದರು.
ಕಡಲಾಮೆ ಸಂರಕ್ಷಣೆಯ ಕುರಿತು ಶ್ರೀ ಅನ್ವಯ, ಪ್ರೊಜೆಕ್ಟರ್ ಕೊ ಆರ್ಡಿನೇಟರ್
ಮತ್ತು ಶ್ರೀ ವೇಂಕಟೇಶ, ಕುಮಾರಿ ಯಶಸ್ವಿನಿ ರಿಸರ್ಚ ಆಫಿಸರ್ ರೋಹಿತ್ ತಾಂಡೆಲ್ ,
ಆಫಿಸರ್ ರವರು ಪೂರ್ಣ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಎನ್ ಎಸ್ ಎಸ್ ಪ್ರೋಗ್ರಾಂ ಆಫಿಸರ್ ಪ್ರೋ. ಗಣಪತಿ
ಕಾಯ್ಕಿಣಿ ವಾಣಿಜ್ಯ ವಿಭಾಗದ ಎಚ್ ಒ ಡಿ ಪ್ರೋ. ಉಷಾ ನಾಯ್ಕ ಹಾಜರಿದ್ದರು.
ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಡಲಾಮೆಸಂರಕ್ಷಣಾ ಜಾಗ್ರತಿ ಕಾರ್ಯಕ್ರಮ
