ಸ್ವಚ್ಛತೆಯ ಸೇವೆ ಎಂಬ ಅಭಿಯಾನವನ್ನು ಗ್ರಾಮ ಪಂಚಾಯತ
ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಡಿಕೋಸ್ತಾರವರು ಉದ್ಘಾಟಿಸಿದರು. ‘’ಸ್ವಭಾವ
ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’’ ಎಂಬ ಧ್ಯೇಯದೊಂದಿಗೆ ಬೇಂಗ್ರೆ ಗ್ರಾಮ ಪಂಚಾಯತ
ವತಿಯಿಂದ ಸಂಕಲ್ಪವನ್ನು ತೊಟ್ಟು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು ಹಾಗೂ
ಬೇಂಗ್ರೆ ಗ್ರಾಮ ಪಂಚಾಯತ ಸಣಬಾವಿ ವಾರ್ಡಿನ ಸಣಬಾವಿ ಸ.ಹಿ.ಪ್ರಾ ಶಾಲೆ ಬೀಚ್
ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಸಂದರ್ಭದಲ್ಲಿ ಗ್ರಾಮ
ಪಂಚಾಯತ ಸದಸ್ಯರು ಮತ್ತು ಅಧಿಕಾರಿಗಳು,ಸಿಬ್ಬಂದಿಗಳು, ಸಣಬಾವಿ ಶಾಲಾ
ವಿದ್ಯಾರ್ಥಿಗಳು, ಶಿಕ್ಷಕರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಆಶಾ ಅಂಗನವಾಡಿ
ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಮಾನ್ಯ ಗೌರವಾನ್ವಿತ ಅಧ್ಯಕ್ಷರು ಮಾತನಾಡಿ ಹಸಿ ಕಸ ಮತ್ತು
ಒಣಕಸವನ್ನು ಮೂಲದಲ್ಲಿ ಬೇರ್ಪಡಿಸುವ ಕೆಲಸ ಆಗಬೇಕು. ಎಲ್ಲೆಂದರಲ್ಲಿ ಕಸವನ್ನು
ಎಸೆಯುವುದನ್ನು ಸಾರ್ವಜನಿಕರು ಮಾಡಬಾರದು ಎಂದು ತಿಳಿ ಮಾತನ್ನು ಹೇಳಿದರು.
‘’ಸ್ವಭಾವಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’’
