ಭಟ್ಕಳ: ತಾಲೂಕಾ ಮಟ್ಟದ ಕರಾಟೆ ಪಂದ್ಯಾವಳಿ:
ದಿನಾಂಕ ೧೮.೦೯.೨೦೨೪ ಬುಧವಾರದಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸಂಯೋಜಕತ್ವದಲ್ಲಿ ತಾಲೂಕಾ ಮಟ್ಟದ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಇಲಾಖಾ ಕರಾಟೆ ಸ್ಪರ್ಧೆಯು ಇಲ್ಲಿನ ರೋಷನಿ ಆಡಿಟೋರಿಯಂ ಒಳಾಂಗಣ ಕ್ರಿಂಡಾAಗಣದಲ್ಲಿ ಯಶಸ್ವಿಯಾಗಿ ನಡೆಯಿತು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿಯವರಾದ ಡಾ.ಪುಷ್ಪಲತಾ ಮಂಕಾಳ್ ವೈದ್ಯರವರು ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸ್ಪರ್ಧಾರ್ಥಿಗಳ ಕುರಿತಾಗಿ ಮಾತನಾಡುತ್ತ ೧೪೦೦ ವರ್ಷಗಳ ಹಿಂದೆ ಕರಾಟೆಯು ಜಪಾನಿನ ಒಂದು ಪ್ರದೇಶವಾದ ಒಕಿನೋವಾದಿಂದ ಇಂದು ಅಂತರಾಷ್ಟಿçÃಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಭಟ್ಕಳದ ಹಲವಾರು ಕ್ರೀಡಾಪಟುಗಳು ಅಂತರಾಷ್ಟಿçÃಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿರುವುದು ಅಭಿನಂದನೀಯ, ಕರಾಟೆಯು ಮನುಷ್ಯನ ಜೀವನದಲ್ಲಿ ಆತ್ಮಸ್ಥೆöÊರ್ಯವನ್ನು ತುಂಬುವ ಕಲೆ ಆಗಿದೆ ಸ್ಪರ್ಥೆಯಲ್ಲಿ ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ತಿಳಿಸಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀ ಹನುಮಂತ ಬೀರಾದರ್ ಪಿ.ಎಸ್.ಐ ಮುರುಡೇಶ್ವರ ಠಾಣೆ ಇವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸ್ಪರ್ಧೆಯಲ್ಲಿ ಸೋಲು ಗೆಲುವು ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು ಇಂದು ಸೋತವರು ಮುಂದೆ ಗೆದ್ದೆ ಗೆಲ್ಲುತ್ತಾರೆ ಎಂದು ಹೇಳುವ ಮೂಲಕ ಸ್ಪರ್ಧಾರ್ಥಿಗಳಿಗೆ ಹುರಿದುಂಬಿಸಿದರು. ಪ್ರಾರ್ಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಒಟ್ಟು ೧೭ ಶಾಲೆಗಳು ಹಾಗೂ ೨೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮಾನ್ಯ ಸಚಿವರು ಮೀನುಗಾರಿಗೆ, ಬಂದರು ಒಳನಾಡು ಜಲಸಾರಿಗೆ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಮಂಕಾಳ್ ಎಸ್ ವೈದ್ಯರವರು ಶುಭ ಹಾರೈಸಿರುತ್ತಾರೆ. ಕಾರ್ಯಕ್ರದಲ್ಲಿ ಪ್ರಾಂಶುಪಾಲರಾದ ಶ್ರೀ ಜಗನ್ನಾಥ ಗೊಂಡ ಅವರು ಉಪಸ್ಥಿತರಿದ್ದು, ಶಿಕ್ಷಕಿಯಾದ ಶ್ರೀಮತಿ ಹೇಮಾವತಿ ನಾಯ್ಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.