

ಆರ್.ಎನ್.ಎಸ್ ಅಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಆರ್.ಎನ್.ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಆರ್.ಎನ್.ಎಸ್ ವಿದ್ಯಾನಿಕೇತನ
ಸಂಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅದ್ದೂರಿಯಾಗಿ ನಡೆಯಿತು.
9 ವಿಶ್ವ ದಾಖಲೆ ನಿರ್ಮಿಸಿ ‘ತನು ಯೋಗ ಭೂಮಿ’ ಕಾರ್ಯಕ್ರಮದ ಮೂಲಕ ಹೆಸರು ಗಳಿಸಿದ ಕು.ತನುಶ್ರೀ
ಇವರಿಂದ ಯೋಗ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಅಶ್ವಿನಿ ಶೇಟ್, ಆರ್.ಎನ್.ಎಸ್
ವಿದ್ಯಾನಿಕೇತನದ ಪ್ರಾಚಾರ್ಯೆ ಶ್ರೀಮತಿ ಗೀತಾ ಕಿಣಿ, ಹಿಂದಿ ಉಪನ್ಯಾಸಕ ಶ್ರೀ ರಾಮ ಖಾರ್ವಿ ವೇದಿಕೆ ಮೇಲೆ
ಉಪಸ್ಥಿತರಿದ್ದರು.
ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು ಹಾಗೂ ಆರ್.ಎನ್.ಎಸ್ ವಿದ್ಯಾನಿಕೇತನದ ಎಲ್ಲಾ
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕು.ಕಾವ್ಯ ದೇವಾಡಿಗ ಎಲ್ಲರನ್ನು
ಸ್ವಾಗತಿಸಿದರೆ ಕು.ರಾಧಿಕಾ ನಾಯ್ಕ ಎಲ್ಲರನ್ನೂ ವಂದಿಸಿದರು, ಕು.ಪ್ರೇಮ ದೇವಾಡಿಗ ಕಾರ್ಯಕ್ರಮವನ್ನು
ಸುಂದರವಾಗಿ ನಿರೂಪಿಸಿದರು.