

ದಿನಾಂಕ ೨೨.೦೬.೨೦೨೪ ಶನಿವಾರದಂದು ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೪-೨೦೨೫ ನೇ ಸಾಲಿಗೆ ಪ್ರಥಮ ಪಿ.ಯು.ಸಿ ಗೆ ದಾಖಲಾತಿಯನ್ನು ಹೊಂದಿದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ವತಿಯಿಂದ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಂದ ಪ್ರೆರ‍್ಸ್ ಡೇ ದಿನಾಚರಣೆಯನ್ನು ವಿಜ್ರಂಭಣೆಯಿAದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾದ ಶ್ರೀ ಮೊಹಮ್ಮದ್ ಪುಝೇಲ್(ಸಿನಿಯರ್ ಸ್ಪೇಷಿಯಲಿಸ್ಟ್) ಮಾತನಾಡುತ್ತಾ ತಾನು ಈ ಸಂಸ್ಥೆಯಲ್ಲಿ ಕಲಿಯುವಾಗ ಸಂಸ್ಥೆಯು ಕಲ್ಪಸಿಕೊಟ್ಟ ಅವಕಾಶಗಳು ವ್ಯಕ್ತಿತ್ವ ವಿಕಸನಕ್ಕೆ ನೀಡಿದ ಒತ್ತು ಮತ್ತು ರಾಜ್ಯದಾದ್ಯಂತೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ನೀಡಿದ ಪ್ರೋತ್ಸಾಹದಿಂದ ಇಂದು ನಾನು ಯಶಸ್ಸು ಕಾಣಲು ಸಾಧ್ಯವಾಯಿತು ಇದಕ್ಕೆ ನಾನು ಈ ಸಂಸ್ಥೆಗೆ ಚಿರಋಣಿ ಯಾಗಿದ್ದೇನೆ ಎಂದು ಸ್ಲಾಗಿಸಿದರು. ಇನ್ನೊರ್ವ ಅಥಿತಿಯಾಗಿ ಆಗಮಿಸಿದ ಹಳೆಯ ವಿದ್ಯಾರ್ಥಿಯಾದ ಶ್ರೀ ನಿಖಿಲ್ ಜೆ.(ಡಿಜಿಟಲ್ ಇಂಜಿನೀಯರ್/ಪುಲ್ ಸ್ಟಾಕ್ ಡೇವಲಾರ‍್ಸ್) ಇವರು ಮಾತನಾಡಿ ಹಿಂದೆ ತಾನು ಅಭ್ಯಾಸ ಮಾಡಿದ ಈ ಸಂಸ್ಥೆಯಲ್ಲಿನ ಅನುಭವಗಳನ್ನು ಹಂಚಿಕೊಳ್ಳುತ್ತಾ ಇಂದು ತಾನು ಈ ಹುದ್ದೆಯಲ್ಲಿ ಇರಲು ಕಾರಣವೇ ಈ ಸಂಸ್ಥೆ ನೀಡಿದ ಉತ್ತಮವಾದ ಶಿಕ್ಷಣದ ಜೋತೆಗಿನ ನೈತಿಕ ಮೌಲ್ಯ ಮತ್ತು ವಿದ್ಯಾಥಿಗಳು ಜೀವನದಲ್ಲಿ ಒಂದು ನಿಶ್ಚಿತವಾದ ಗುರಿಯನ್ನು ಇಟ್ಟುಕೊಂಡು ಆ ಗುರಿ ಸಾಧನೆಗಾಗಿ ಹೇಗೆ ಶ್ರಮಿಸಬೇಕು ಎಂಬುವುದನ್ನು ರೂಡಿಸಿಕೊಟ್ಟತು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೀನಾ ವ್ಯದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿಯವರಾದ ಡಾ.ಪುಷ್ಪಲತಾ ಎಂ ವೈದ್ಯ ರವರು ಮಾತನಾಡಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಗೆ ಸಂಬAಧಿಸಿದAತೆ ನಮ್ಮ ಬೆಂಬಲ ಸದಾ ಇದೆ, ಇಲ್ಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎನ್ನುವುದನ್ನು ಒಂದು ಸಣ್ಣ ಕಥೆಯ ಮೂಲಕ ವಿದ್ಯಾರ್ಥಿಗಳಗೆ ತಿಳಿಸುತ್ತಾ, ಮುಂದಿನ ದಿನಗಳಲ್ಲಿ ತಮ್ಮೆಲ್ಲರನ್ನು ಉನ್ನತ ಸ್ಥಾನದಲ್ಲಿ ನೋಡಬೇಕೆನ್ನುವುದು ನಮ್ಮ ಮಹಾದಾಶೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಾದ ಕುಮಾರಿ ಅನುಷಾ ಮತ್ತು ಕುಮಾರಿ ಆಯಿಷಾ. ಸ್ವಾಗತನ್ನು ಕುಮಾರಿ ಸಾನ್ವಿತಾ ಹಾಗೂ ವಂದನಾರ್ಪಣೆಯನ್ನು ಕುಮಾರಿ ಸಫಾ ರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾರಾದ ಶ್ರೀಯುತ ನಯೀಮ್ ಗೊರಿ ಅವರು ಹಾಗೂ ಬೊಧಕ ಬೊಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.