

ಆರ್ ಏನ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ- 2024
ಆರ್ ಏನ್ ಪ್ರಥಮ ದರ್ಜೆ ಕಾಲೇಜಿನ ಏನ್ ಎಸ್ ಎಸ್ ಘಟಕದ ವತಿಯಿಂದ
ದಿನಾಂಕ 21.06.2024 ಬೆಳಿಗ್ಗೆ 10 ಗಂಟೆಗೆ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತಾಡಿದ ಡಾ. ದಿನೇಶ್ ಗಾವಂಕರ್ ರವರು 2024ರ ಘೋಷ ವಾಕ್ಯವಾದ ಮಹಿಳಾ ಸಬಲೀಕರಣದಲ್ಲಿ ಯೋಗದ ಮಹತ್ವ ಕುರಿತು ಮಾತನಾಡುತ್ತ ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕ ಎಂದರು, ಕಾರ್ಯಕ್ರಮದಲ್ಲಿ ಯೋಗ ತರಬೇತಿ ದರರಾಗಿ ಆಗಮಿಸಿದ ಪ್ರೊ. ರಾಮ ಖಾರ್ವಿಯವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸಿ ಮತ್ತು ಕೆಲವು ಯೋಗಾಸನ ನಡೆಸಿ ಕೊಟ್ಟರು…. ವೇದಿಕೆಯಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ಗಿನ್ನಿಸ್ ದಾಖಲೆ ಮಾಡಿದ ಯೋಗ ಪಟು ಕುಮಾರಿ ತನುಶ್ರೀ ಉಡುಪಿ ಅವರಿಂದ ಯೋಗಾಸನ ಪ್ರದರ್ಶನ, ಯೋಗ ಪ್ರಾತ್ಯಕ್ಷತೆ , ದೇಶಭಕ್ತಿ ಬಿಂಬಿಸುವ ಹಾಡು .. ಕಿರುಚಿತ್ರ ಪ್ರದರ್ಶನ ನಡೆದು ವಿದ್ಯಾರ್ಥಿಗಳನ್ನು ರಂಜಿಸಿ ಯೋಗದ ಕುರಿತು ಮಾಹಿತಿ ನೀಡಿದರು, ವೇದಿಕೆಯಲ್ಲಿ ಶ್ರೀ ಉದಯ ಕುಮಾರ, ಶ್ರೀಮತಿ ಸಂಧ್ಯಾ, ಪ್ರೊ. ಗಣೇಶ್ ನಾಯ್ಕ್, ಏನ್. ಎಸ್. ಎಸ್ ಯೋಜನಾಧಿಕಾರಿಗಳು ಗಣಪತಿ ಕಾಯ್ಕಿಣಿ ಹಾಜರಿದ್ದರು, ಕಾರ್ಯಕ್ರಮದ ನಿರೂಪಣೆ ಸ್ವಾಗತಿಸಿದ ಕುಮಾರಿ ಸಂಪ್ರಿತಾ ನಾಯ್ಕ್ ಮಾಡಿದರು.ಇದೆ ವೇದಿಕೆಯಲ್ಲಿ ಪ್ರೊ. ರಾಮ ಖಾರ್ವಿ, ಕುಮಾರಿ ತನುಶ್ರೀ ಅವರನ್ನು ಕಾಲೇಜುವತಿಯಿಂದ ಸನ್ಮಾನಿಸಲಾಯಿತು.