ದೇಶ ಗೆಲ್ಲಬೇಕಾದರೆ ಭಾರತೀಯ ಜನತಾ ಪಾರ್ಟಿ ಗೆಲ್ಲ ಬೇಕು : ಕೋಟಾ ಶ್ರೀನಿವಾಸ ಪೂಜಾರಿ

Share

ಭಟ್ಕಳ: ಮೇ 7 ರಂದು ನಡೆಯುವ ಚುನಾವಣೆ “ಭಾರತ್ ಮಾತಾ ಕೀ ಜೈ” ಎನ್ನುವವರಿಗೂ ಮತ್ತು “ಪಾಕಿಸ್ತಾನ ಜಿಂದಾ ಬಾದ್” ಎನ್ನುವವರಿಗೆ ಬೆಂಬಲಿಸಲು ನಡೆಯುವ ಚುನಾವಣೆಯಾಗಿದ್ದು ದೇಶ ಗೆಲ್ಲಬೇಕಾದರೆ ಭಾರತೀಯ ಜನತಾ ಪಾರ್ಟಿ ಗೆಲ್ಲ ಬೇಕು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂದು ಉಡುಪಿ ಲೋಕಾಸಭಾ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಮಣ್ಕುಳಿಯಲ್ಲಿರುವ ಬಿಜೆಪಿ ಪಕ್ಷದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ಭಾರತ್ ಮಾತಾ ಕೀ ಜೈ” ಎಂದು ನನಗಿಂತ ನನ್ನ ಜಾತಿ, ಧರ್ಮಕ್ಕಿಂತ ನನ್ನ ದೇಶ ಮೊದಲು ಎನ್ನುವ ರಾಷ್ಟ್ರ ಭಕ್ತರು ಕೋಟ್ಯಂತರ ಸಂಖ್ಯೆಯಲ್ಲಿ ಸಮರ್ಪಣಾ ಮನೋಭಾವದಿಂದ “ರಾಷ್ಟ್ರ ಭಕ್ತ” ಮತ್ತು “ದೇಶ ಭಕ್ತ” ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎನ್ನುವ ಹಂಬಲದಲ್ಲಿದ್ದರೆ. ಮತ್ತೊಂದಿಷ್ಟು ಜನ ಕರ್ನಾಟಕದ ಜ್ಞಾನ ದೇಗುಲವಾಗುಲ ಹಾಗೂ ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾ ಬಾದ್ ಎನ್ನುವವರಿದ್ದಾರೆ. ನಾಳೆ ನಡೆಯುವ ಚುನಾವಣೆ ಚುನಾವಣೆ “ಭಾರತ್ ಮಾತಾ ಕೀ ಜೈ” ಎನ್ನುವವರಿಗೂ ಮತ್ತು “ಪಾಕಿಸ್ತಾನ ಜಿಂದಾ ಬಾದ್” ಎನ್ನುವವರಿಗೆ ಬೆಂಬಲಿಸಲು ನಡೆಯುವ ಚುನಾವಣೆಯಾಗಿದ್ದು ದೇಶ ಗೆಲ್ಲಬೇಕಾದರೆ ಭಾರತೀಯ ಜನತಾ ಪಾರ್ಟಿ ಗೆಲ್ಲ ಬೇಕು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕಾದ ಅವಶ್ಯಕತೆ ಇದೆ ಎಂದು ಜನಸಾಮಾನ್ಯರರಲ್ಲಿ ಮತ್ತು ಮತದಾರರಲ್ಲಿ ಕೇಳಿಕೊಳ್ಳುತ್ತೇನೆ.

ರಾಜಕಾಣದಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಮಟ್ಟಕ್ಕೆ ಕಾಂಗ್ರೆಸ್ ಪಕ್ಷ ಇಳಿದಿದೆ. ಸಂವಿಧಾನದವನ್ನು ಬದಲಿಸುವ ಮೂಲಕ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಸಂವಿಧಾನಕ್ಕೆ ತಿದ್ದು ಪಡಿ ತಂದು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿ. ಬಹು ಸಂಖ್ಯಾತರ ಮೀಸಲಾತಿಯನ್ನು ದಲಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿತಗೊಳಿಸುವ ಸಂಚನ್ನು ಕಾಂಗ್ರೆಸ್ ಮಾಡುತ್ತಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬಗ್ಗೆ ಅವರ ಓಲೈಕೆ ಮಾಡಲು ಕಾಂಗ್ರೆಸ್ ಪಕ್ಷದ ಸುಳ್ಳಿನ ಕಂತೆಗಳನ್ನು ಕಟ್ಟುತ್ತಿರುವುದು ನಾವು ನೋಡ ಬಹುದಾಗಿದೆ. ಸಂವಿಧಾನದ ವನ್ನು ಬಿಜೆಪಿಗರು ಬದಲಾಯಿಸುತ್ತಾರೆ ಎಂದು ಅಪಪ್ರಚಾರ ಮಾಡಿದ್ದಾರೆ. ಈ ದೇಶದ ಸಂವಿಧಾನದ ಬರೆದ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಕ್ಕೆ ಬಿಜೆಪಿ ಪಕ್ಷ ಮತ್ತಷ್ಟು ಶಕ್ತಿ ನೀಡುತ್ತದೆ ಎಂದಾರು.

ಬಾಬಾ ಸಾಹೇಬ್ ಅಂಬೇಡ್ಕರ್ ಚುನಾವಣೆಗೆ ನಿಂತಾಗ ಎರಡು ಬಾರಿ ಸಾಮಾನ್ಯ ವ್ಯಕ್ತಿಗಳನ್ನು ನಿಲ್ಲಿಸಿ. ಮತ್ತೆ ಅವರನ್ನು ಸಧನಕ್ಕೆ ಹೋಗತಂತೆ ಮಾಡಿರುವುದು ಕಾಂಗ್ರೆಸ್ ಪಕ್ಷ. ಅವರ ಪರವಾಗಿ ನಿಂತಿರುವ ನಮ್ಮ ಜನ ಸಂಘದ ಕಾರ್ಯಕರ್ತರು ಇದರಿಂದಾಗಿ ಅವರಿಗೆ ಅವಮಾನ ಮಾಡಿರುವುದು ಕಾಂಗ್ರೆಸ್ ಪಕ್ಷ ಹೊರೆತು ಬಿಜೆಪಿ ಪಕ್ಷವಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂಬೇಡ್ಕರ್ ರವರ ವಾಸಿಸಿದ ಮನೆ, ಅವರು ಮಾಡಿರು ಕೆಲಸ ಹಾಗೆ ಐದು ಭಾಗಗಳನ್ನು ಕೇಂದ್ರ ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆದುಕೊಂಡು ಸಾವಿರಾರು ಕೋಟಿ ವೆಚ್ಚ ಮಾಡಿ “ಪಂಚ ತೀರ್ಥ” ಎಂದು ಹೆಸರಿಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಕೊಟ್ಟಿರುವುದು ಪರ್ಕ್ಧಾನಿ ನರೇಂದ್ರ ಮೋದಿ ಎಂದು ಹೇಳಿದರು. ಆದರೆ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ 23 ಸಾವಿರ ಕೋಟಿಗು ಅಧಿಕ ಹಣವನ್ನು ಗ್ಯಾರಂಟಿ ಭಾಗ್ಯಕ್ಕೆ ಉಪಯೋಗಿಸಿಕೊಳ್ಳುವುದರ ಮೂಲಕನ ಕಾಂಗ್ರೆಸ್ ಪಕ್ಷ ತುಲನೆ ಮಾಡಿದೆ ಎಂದು ಆರೋಪಿಸಿದ್ದು ಇದಕ್ಕೆ ಕಾಂಗ್ರೆಸ್ ಪಕ್ಷ ತಕ್ಷಣ ಉತ್ತರ ನೀಡಿ ಬೇಕು ಎಂದರು.

ನಮ್ಮ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಹನ್ನೊಂದುವರೆ ಸಾವಿರ ಕೋಟಿ ಶೌಚಾಲಯ ಕಟ್ಟಿಕೊಟ್ಟರು ಸಹ ಕಾಂಗ್ರೆಸ್ ಪಕ್ಷದವರು ಇನ್ನು ತನಕ ಚೊಂಬು ಹಿಡಿದುಕೊಂಡೆ ಹೋಗುವುದು ಬಿಟ್ಟಿಲ್ಲ ಇದಕ್ಕೆ ಕಾಂಗ್ರೆಸ್ ಪಕ್ಷವೇ ಉತ್ತರ ಕೊಡಬೇಕು ಎಂದು ವ್ಯಂಗ್ಯವಾಡಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ತಾಲೂಕು ಕಾರ್ಯದರ್ಶಿ ಶ್ರೀನಿವಾಸ ನಾಯ್ಕ,ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಕೆ.ಕೆ ಮೋಹನ ಹಾಗೂ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!