ಭಟ್ಕಳ: ನಾವು ರಾಷ್ಟ್ರವನ್ನು ಕಟ್ಟಲು ಹೊರಟಿ ರುವ ಮತ ಎಂದು ತಿಳಿದು ಮೋದಿಯವರನ್ನು ಹಾಗೂ ದೇಶವನ್ನು ನೋಡಿ ಮತ ಚಲಾವಣೆ ಮಾಡಬೇಕು ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಭಟ್ಕಳದಲ್ಲಿ ಹೇಳಿದರು.
ಅವರು ಭಾರತೀಯ ಜನತಾ ಪಾರ್ಟಿ ಭಟ್ಕಳ ಬಿಜೆಪಿ ಮತ್ತು ಬಿಜೆಪಿ ಯುವ ಮೋರ್ಚಾ ಇವರ ಸಹಯೋಗದೊಂದಿಗೆ ಮೋದಿಗಾಗಿ ಬ್ರಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಕರಾವಳಿ ಭಾಗವಾದ ಭಟ್ಕಳದಿಂದ ಕಾರವಾರದ ತನಕ ಆಗಿನ ಕಾಲದಲ್ಲಿ ನನ್ನ ತಂದೆಯವರೊಂದಿಗೆ ಭಟ್ಕಳ ಭಾಗದ ಬಿಜೆಪಿ ಬಲ ಪಡಿಸಿದ ಡಾ.ಚಿತ್ತರಂಜನ್, ತಿಮ್ಮಪ್ಪ ನಾಯ್ಕ,ಲಕ್ಷ್ಮಣ ನಾಯ್ಕ, ಕ್ರಷ್ಣ ನಾಯ್ಕ ,ಬಾಬು ಮಾಸ್ತರ ಹಾಗೂ ಅನೇಕ ಹಿರಿಯರು ಪಕ್ಷ ವನ್ನು ಕಟ್ಟಲು ಕೆಲಸ ಮಾಡಿರುದನ್ನು ನೆನೆಪು ಮಾಡಿಕೊಂಡ ಅವರು ಹಿಂದಿನ ಚುನಾವಣೆಗು ಈಗಿನ ಚುನಾವಣೆಗು ಬಹಳ ವ್ಯವಸ್ಥೆವಿದ್ದು. ಅಭಿವೃದ್ಧಿಯ ಪತವು ಉತ್ತುಂಗಕ್ಕೆ ಹೋಗಿರುವ ಕ್ಷಣಗಳಾಗಿದೆ. ಸದ್ಯ ಈ ಭಾಗದಲ್ಲಿ ಶಾಸಕರು ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿಗಳು ಕೂಡ ಅವರೇ ಇದ್ದರು ಒಂದು ನಯಾ ಪೈಸೆಯ ಅಭಿವೃದ್ಧಿ ಕೆಲಸ ತರಲು ಸಾಧ್ಯವಾಗದೆ ಇರುವ ಪರಿಸ್ಥಿತಿಯಲ್ಲಿದ್ದಾರೆ. “ದೋಣಿಯಿಂದ ನೀರಿಗೆ ಜಿಗಿದರೆ ನಾನು ಆಡಳಿತ ನಡೆಸಿ ಬಿಡುತ್ತೇನೆ ಎನ್ನುವ ಮಂತ್ರಿಗಳು ಇಲ್ಲಿ ಇದ್ದಾರೆ” ಅದೆಲ್ಲ ಇಲ್ಲಿ ಆಗೋದಿಲ್ಲ, ನಾವು ಆಡಳಿತದಲ್ಲಿ ಧುಮುಕುವ ಕೆಲಸ ಮಾಡಬೇಕು , ಭ್ರಷ್ಟರನ್ನು ನಿಗ್ರಹ ಮಾಡುವ ಕೆಲಸ ಮಾಡಬೇಕು ಮತ್ತು ಈ ಭಾಗದಲ್ಲಿ ಅಂತಾರಾಷ್ಟ್ರೀಯ ಟೆರರಿಸ್ಟ್ ಹೆಸರಿನ ಮೇಲೆ ಭಟ್ಕಳ ನಿಂತಿದ್ದು ಅಂತಹ ಕೆಟ್ಟ ಹೆಸರನ್ನು ತೆಗೆಯುವ ಕೆಲಸ ಮಾಡಬೇಕಾಗಿದ್ದು ಅದು ನಮ್ಮ ಮುಖ್ಯ ಗುರಿಯಾಗ ಬೇಕು. ಭಟ್ಕಳ ಆಡಳಿತ ಹಾಗೂ ನಿಸ್ವಾರ್ಥ ಸೇವೆ ಮಾಡುವಂತ ತಮಗೆ ಈ ಕಳಂಕ ರಹಿತ ಆಡಳಿತವನ್ನು ತಂದು ಕೊಡುವ ಮೂಲ ಉದ್ದೇಶ ಆಗಿದೆ ಎಂದರು.
ಆಗಿನ ಬಿಜೆಪಿ “ಡಬಲ್ ಇಂಜಿನ್” ಕೇಂದ್ರ ಹಾಗೂ ರಾಜ್ಯ ಸರ್ಕಾರ ಏನೇ ಕೇಳಿದರು ಈಡೇರಿಸುವ ಕೆಲಸ ಮಾಡುತ್ತಿತ್ತು. ಆದರೆ ಈಗ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ರಾಜ್ಯದಲ್ಲಿದೆ. ಅದೇ ರೀತಿ ಈ ಕರಾವಳಿ ಭಾಗದಲ್ಲಿ ಸಮಸ್ಯೆಗಳು ಬೇರೆ ರೀತಿಯಲ್ಲಿದೆ. ಪೋರ್ಟ್ , ಮೀನುಗರಿಕೆ ಸಮಸ್ಯೆ, ಡೀಸೆಲ್ ಸಬ್ಸಿಡಿಗಳಿಗೆ ಅನೇಕ ಸಹಾಯ ಹಸ್ತವನ್ನು ಕೊಡುವ ಕೆಲಸ ನಡೆದಿತ್ತು.ಈಗ ಅವುಗಳೆಲ್ಲ ಕುಂಠಿತಗೊಂಡಿದೆ ಮತ್ತು ದರಗಳು ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆಗೊಂಡಿದೆ. ನಾವು ಫ್ರೀ ಭಾಗ್ಯ ಕೊಟ್ಟಿದ್ದೇವೆ ಎಂದು ಹೇಳಿ ನಮ್ಮಿಂದ ತೆಗದು ನಮ್ಮ ಅಕ್ಕ ತಂಗಿರಿಗೆ ಕೋಟುವ ಕೆಲಸ ಮಾಡಿ. ನಮ್ಮ ಜೋಬಿಗೆ ಕತ್ತರಿ ಹಾಕುತ್ತಿದ್ದಾರೆ. ಇದಕ್ಕಾಗಿ ನಮಗೆ ಪ್ರತಿಷ್ಠೆಯಾಗಿ ತೆಗೆದುಕೊಂಡು ಈ ಚುನಾವಣೆಯಲ್ಲಿ ಮೋದಿ ಹಾಗೂ ನಮ್ಮ ಅಭ್ಯರ್ಥಿ ಕಾಗೇರಿಗೆ ಅತ್ಯಂತ ಬಹುಮಾತವನ್ನು ನೀಡುವ ಮೂಲಕ ಗೆಲ್ಲಿಸಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಕಿತ್ತೂರು ಖಾನಪುರದಿಂದ ಸಿರ್ಸಿ, ಹಳಿಯಾಳ, ದಾಂಡೇಲಿ ಕಡೆಗೆ ಬರಲು ಆಗುದಿಲ್ಲ. ಅದರಲ್ಲೂ ಭಟ್ಕಳ ಕಡೆಗಂತೂ ಬರಲು ಸಾಧ್ಯವಾಗಗದೆ ಇರುವ ಮಾತು. ಅವರು ಕಿತ್ತೂರು ಖಾನಪುರದಿಂದ ಹೊರಗಡೆಯೇ ಇರುತ್ತಾರೆ. ಈ ಕ್ಷೇತ್ರದಲ್ಲಿ ಇವತ್ತಿನ ಪರಿಸ್ಥಿತಿಗೆ ಹಿಂದುತ್ವದ ಕಡೆಗೆ ಮಾತನಾಡುತ್ತಾ ನಾವು ಮುಂದೆ ಹೋಗುತ್ತೇವೆ ಎನ್ನುವ ಮಾತುಗಳಿದ್ದರು. ನರೇಂದ್ರ ಮೋದಿಯವರ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” “ವಿಶ್ವಾಸ್ ಕಾ ಸಾಥ್” “ಪ್ರಯಾಸ್ ಕಾ ಸಾಥ್” ನಾವು ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗಬೇಕು ಎನ್ನುವಂತ ಕ್ಷೇತ್ರವಿದು ಎಂದರು
ನಂತರ ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಹೊರಟ ಬೈಕ್ ರ್ಯಾಲಿ ಮಾರಿಕಟ್ಟೆ ಮೂಲಕ ಆಸರಕೇರಿ ರಸ್ತೆಯಿಂದ ವಶುಪತಿ ದೇವಸ್ಥಾನ ಮಾರ್ಗವಾಗಿ ಬಂದರ ರಸ್ತೆ ಮುಖಾಂತರ ಶಂಸುದ್ದಿನ್ ಸರ್ಕಲನಿಂದ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಪುನಃ ಚನ್ನ ಪಟ್ಟಣ ಹನುಮಂತ ದೇವಸ್ಥಾನಕ್ಕೆ ತೆರಳುವ ಮೂಲಕ ಬೈಕ್ ರ್ಯಾಲಿ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಹಿರಿಯ ಮುಖಂಡ ಗೋವಿಂದ ನಾಯ್ಕ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ತಾಲೂಕು ಕಾರ್ಯದರ್ಶಿ ಶ್ರೀನಿವಾಸ ನಾಯ್ಕ,ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಕೆ.ಕೆ ಮೋಹನ , ಬಿಜೆಪಿ ಮುಖಂಡ ಈಶ್ವರ ನಾಯ್ಕ, ಶಿವಾನಿ ಶಾಂತರಾಮ, ಯುವಮುರ್ಚಾ ಅಧ್ಯಕ್ಷ ಸುನೀಲ ಕಾಮತ್ ಹಾಗೂ ಬಿಜೆಪಿ ಹಿರಿಯ ಕಿರಿಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು