ಭಟ್ಕಳ : ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಗೊಂಡಿದ್ದು ಭಟ್ಕಳ ತಾಲೂಕಿನ ೧೮ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಭಟ್ಕಳದಲ್ಲಿ ನ್ಯೂ ಇಂಗ್ಲಿಷ್ ಸ್ಕೂಲ್, ಆನಂದ್ ಆಶ್ರಮ ಕಾನ್ವೆಂಟ್ ಸ್ಕೂಲ್, ಸೋನಾರ್ಕೇರಿ ಸರ್ಕಾರಿ ಪ್ರೌಢ ಶಾಲೆ, ಬೆಳ್ಕೆ ಸರಕಾರಿ ಶಾಲೆ, ಶಿರಾಲಿ ಜನತಾ ವಿದ್ಯಾಲಯ ಶಾಲೆ, ಬೀನ ವೈದ್ಯ ಶಾಲೆ ಮುರ್ಡೇಶ್ವರ,ಇಸ್ಲಾಮಿಯಾ ಆಂಗ್ಲೋ ಉರ್ದು ಹೈಸ್ಕೂಲ್ ಭಟ್ಕಳ, ಅಂಜುಮನ್ ಗರ್ಲ್ಸ್ ಹೈಸ್ಕೂಲ್ (ಬಸ್ತಿ ರಸ್ತೆ, ಭಟ್ಕಳ), ಸೇರಿದಂತೆ ಎಂಟು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಭಟ್ಕಳದಲ್ಲಿ ಒಟ್ಟು 2336 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದು, ಮೊದಲ ದಿನವಾದ ಇಂದು ಒಟ್ಟು 18 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಪರೀಕ್ಷಾ ಕೇಂದ್ರದ ಹೊರಗೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ನಕಲು ತಡೆಯಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಪರೀಕ್ಷಾ ಕೇಂದ್ರಗಳ 200 ಮೀಟರ್ ಪ್ರದೇಶವನ್ನು ನಿಷೇಧಿಸಲಾಗಿದೆ.
ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ದೂರದ ಸ್ಥಳಗಳ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ ಪರೀಕ್ಷಾ ಕೇಂದ್ರಗಳಿಗೆ ಮತ್ತು ಪರೀಕ್ಷೆ ಕೇಂದ್ರಗಳಿಂದ ಮನೆಗೆ ಮರಳಬಹುದು.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಥವಾ ಅಂಕಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶವನ್ನು ಒದಗಿಸಿದೆ, ಆದ್ದರಿಂದ ಮೊದಲ ಪ್ರಯತ್ನದಲ್ಲಿ ವಿಫಲರಾದರೆ, ಎರಡನೇ ಅಥವಾ ಮೂರನೇ ಪ್ರಯತ್ನದಲ್ಲಿ ಉತ್ತೀರ್ಣರಾಗಬಹುದು, ಮೊದಲ ಪ್ರಯತ್ನದ ಪರೀಕ್ಷೆಯು ಮಾರ್ಚ್ 25 ರಿಂದ ಪ್ರಾರಂಭವಾಗಿ, ಏಪ್ರಿಲ್ 6 ರವರೆಗೆ , ಜೂನ್ 12 ರಿಂದ ಜೂನ್ 19 ರವರೆಗೆ ಎರಡನೇ ಪರೀಕ್ಷೆ ಮತ್ತು ಜುಲೈ 3 ರಿಂದ ಆಗಸ್ಟ್ 5 ರವರೆಗೆ ಮೂರನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಗಿದೆ. ಒಂದು ವರ್ಷ ವ್ಯರ್ಥವಾಗದಂತೆ ವಿದ್ಯಾರ್ಥಿಗಳು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು.