ಸಚಿವ ಮಾಂಕಾಳ್ ವೈದ್ಯ ಅವರು ಮಂಗಳವಾರ ಭಟ್ಕಳದ ಅರ್ಬನ್ ಬ್ಯಾಂಕ್ ನಲ್ಲಿರುವ ಹಫಿಝ್ಕಾ ಸಭಾಂಗಣದಲ್ಲಿ ಉ.ಕ.ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿ, ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದ್ದೇವೆ. ಈಗ ಐದು ಗ್ಯಾರಂಟಿ ಜಾರಿಗೆ ತಂದು ತೋರಿಸಿದ್ದೇವೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮವರೇ ಪ್ರಧಾನಿ, ಉತ್ತರ ಕನ್ನಡ ಜಿಲ್ಲೆ ಲೋಕಾಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಂತ್ರಿಯಾಗುತ್ತಾರೆ ಎಂದು ಹೇಳಿದರು.
ಬಿಜೆಪಿಯವರು ಸುಳ್ಳನ್ನು ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡುತ್ತಾರೆ ನಾವು ನಮ್ಮ ಸಾಧನೆ ಹಾಗೂ ಕೆಲಸವನ್ನು ಮುಂದುಕೊಂಡು ಮತವನ್ನು ಕೇಳುತ್ತಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಇದಕ್ಕೆ ಪರಿಹಾರ ಕೇಂದ್ರದಲ್ಲಿ ನಮ್ಮ ಸರಕಾರ ಇದ್ದಾಗ ಮಾತ್ರ ಸಾಧ್ಯ ಎಂದುರು.
ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಲಕ್ಷ 92 ಸಾವಿರ ಮತಗಳಿವೆ ಕಳೆದ 20 ವರ್ಷಗಳ ಕಾಲ ನಮ್ಮ ಪಕ್ಷ ಈ ಕ್ಷೇತ್ರವನ್ನು ಕಳೆದುಕೊಂಡಿದೆ. ಡಾ. ಅಂಜಲಿ ನಿಂಬಾಳ್ಕರ್ ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದು ಅವರೇ ಮೊದಲಿಗರು ಡಾ. ಅಂಜಲಿ ಹೆಬ್ಬಾಳ್ಕರ್ ಅವರು ಖಾನಾಪುರದಲ್ಲಿ ಮಹಿಳೆಯರಿಗೆ 60 ಬೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಿದ್ದು ಇದು ಅವರ ಸಾಧನೆ. ನನಗೆ ಒಂದು ಲಕ್ಷ ಅಧಿಕ ಮತವನ್ನು ನೀಡಿ ಗೆಲ್ಲಿಸಿದ್ದೀರಿ. ಅದರಂತೆ ಈ ಬಾರಿಯೂ ಲೋಕಸಭೆ ಚುನಾವಣೆಗೂ ಅತ್ಯಧಿಕ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಹೇಳಿದರು. ನನಗೆ ನನ್ನ ಕ್ಷೇತ್ರದ ಜನರ ಮೇಲೆ ನಂಬಿಕೆ ಇದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಮಾತನಾಡಿ ಕಳೆದ ಹತ್ತು ವರ್ಷದಲ್ಲಿ ಬಿಜೆಪಿ ಸರಕಾರವು ಎಲ್ಲವೂ ಸುಳ್ಳು ಭರವಸೆ ನೀಡಿ ಕಾಲ ಹರಣ ಮಾಡಿದೆ ಯಾವುದೇ ಭರವಸೆಗಳು ಜಾರಿಗೆ ತಂದಿಲ್ಲ ಮನ್ ಕಿ ಬಾತ್ ನಲ್ಲಿ ಮೋದಿ ಅವರು ಎಸಿ ರೂಮಿನಲ್ಲಿ ಕುಳಿತು ಜನರಿಗೆ ಮೋಸವನ್ನು ಮಾಡುತ್ತಿದ್ದಾರೆ. ದೇಶವನ್ನು ರಕ್ಷಿಸುವ ಮತ್ತು ಜನರಿಗೆ ನ್ಯಾಯ ಕೊಡಿಸುವ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ನಮ್ಮ ಸರಕಾರ ತಂದಿರುವ 5 ಗ್ಯಾರಂಟಿ ಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರೆ ಸಾಕು ನಾವು ಸುಲಭವಾಗಿ ಗೆಲ್ಲುತ್ತೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೋಗೇರ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್. ನಾಯ್ಕ ನಾಮಧಾರಿ ಸಮಾಜದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಜಯಶ್ರ ಮೊಗೇರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅಲ್ಬರ್ಟ ಡಿಕೋಸ್ತಾ, ಮುಖಂಡರಾದ ಅಬ್ದುಲ್ ರವೂಫ್ ನಾಯ್ತೆ, ಹಿರಿಯ ಮುಖಂಡ ವೆಂಕಟಯ್ಯ ಬೈರುಮನೆ, ಉಪಸ್ಥಿತರಿದ್ದರು.