ಆರ್. ಎನ್‌, ಎಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

Share

ಆರ್. ಎನ್‌, ಎಸ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ
ದಿನಾಂಕ: 18-03-2024 ಸಂಜೆ 4:30 ರಿಂದ ಆರ್. ಎನ್. ಎಸ್‌ ಪ್ರಥಮ ದರ್ಜೆ ಕಾಲೇಜು ಮುಡೇಶ್ವರದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರವನ್ನು ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳದ ಹಿರಿಯ ಪತ್ರಕರ್ತರು,ಯಕ್ಷಗಾನ ಹವ್ಯಾಸಿ ಕಲಾವಿದರಾದ ಶ್ರೀ ಸುಬ್ರಹ್ಮಣ್ಯ ಭಟ್‌ ದಾಸನಕುಡಿಕೆಯವರು ಮಾತನಾಡಿ ದೇಶ ನಮಗೇನು ಕೊಟ್ಟದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯವಾಗಿದೆ. ದೇಶಸೇವೆ ಮಾಡಲು ಹಲವು ಮಾರ್ಗಗಳಿವೆ. ಆದರಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮುಖ್ಯ ಪಾತ್ರ ವಹಿಸುತ್ತದೆ. ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ. ದಿನೇಶ ಗಾಂವ್ಕರರವರು ಮಾತನಾಡಿ ಅರಿವೆ ನಮ್ಮ ಗುರು ಪ್ರತಿಯೊಬ್ಬರು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಶ್ರಮ್ರಕ್ಕೆ ಬೆಲೆಕೊಟ್ಟು ಬದುಕಿ ಜೀವನ ಸಾರ್ಥಕ ಗೊಳಿಸಿಕೊಳ್ಳಬೇಕೆಂದರು, ಹಾಗೂ ವಿದ್ಯಾರ್ಥಿ ಜೀವನ ಒಂದು ಸುಂದರ ಕ್ಷಣ ಇಂತಹ ವಿಶೇಷ ಶಿಬಿರದ ಅನುಭವಗಳನ್ನು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಶಿಬಿರ ಸಹಕಾರಿಯಾಗುವುದು ಎಂದರು.
ಯೋನಾಧಿಕಾರಿಗಳಾದ ಗಣಪತಿ ಕಾಯ್ಕಿಣಿಯವರು ಮಾತನಾಡಿ ವಿದ್ಯಾರ್ಥಿಗಳು ಸಮರ್ಪಣಾ ಭಾವವನ್ನು ಬದುಕಿನಲ್ಲಿ ಬೆಳಸಿಕೊಂಡು ನನಗಾಗಿ ಅಲ್ಲ ನಿನಗೆ ಎಂಬ ದ್ಯೇಯದೊಂದಿಗೆ ದೇಶ ಕಾಯುವ ಆಂತರಿಕ ಸೈನಿಕನಾಗಿ ಶಿಸ್ತು ಸಂಯಮ,ತಾಳ್ಮೆ, ಶ್ರಮದ ಮಹತ್ವವನ್ನ ಅರಿತುಕೊಳ್ಳಲು ಇಂತಹ ಶಿಬಿರಗಳು ಉಪಯುಕ್ತ ಎಂದರು. ವೇದಿಕೆಯಲ್ಲಿ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಎಂ ಪಿ ಭಂಡಾರಿ, ಉಪನ್ಯಾಸಕ ಶ್ರೀ ಕೃಷ್ಣ ಹೆಗಡೆ, ಸಂಯೋಜನಾಧಿಕಾರಿ ಶ್ರೀ ಗಣೇಶ ನಾಯ್ಕ ಹಾಜರಿದ್ದರು. ಕುಮಾರಿ ಸುಪ್ರಿತಾ ನಾಯ್ಕ ನಿರೂಪಣೆ ಮಾಡಿ, ಕುಮಾರಿ ರಕ್ಷಿತಾ ಸ್ವಾಗತಿಸಿ,ಕುಮಾರಿ ಚೇತನಾ ನಾಯ್ಕ ವಂದನಾರ್ಪಣೆಗೈದಳು.
ಸಭಾ ಕಾರ್ಯಕ್ರಮದ ನಂತರ ಶ್ರೀ ಮುರುಡೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಇದರಿಂದ ʼಪಂಚವಟಿ ʼ ಯಕ್ಷಗಾನ ತಾಳಮದ್ದಳೆ ನಡೆದು ಯಕ್ಷರಸದೌತಣ ಉಣಬಡಿಸಿದರು.

Leave a Reply

Your email address will not be published. Required fields are marked *

error: Content is protected !!