ಭಟ್ಕಳ: ಕಡಲತೀರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Share

ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ಯುವ ಮತದಾರರಲ್ಲಿ ಮತದಾನದ ಅರಿವು ಮೂಡಿಸಲು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಎನ್.ಎಸ್.ಎಸ್ ಘಟಕ, ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಕೌಶಲ್ಯಾಭಿವೃದ್ಧಿ ಒಡಂಬಡಿಕೆ ಹೊಂದಿದ ಸಂಸ್ಥೆಯಾದ ದೇಶಪಾಂಡೆ ಸ್ಕಿಲ್ಲಿಂಗ್ ನ ವಿದ್ಯಾರ್ಥಿಗಳಿಂದ ವಿಭಿನ್ನವಾದ ಜಾಗೃತಿ ಕಾರ್ಯಕ್ರಮವು ಜರುಗಿತು.
ತಾಲೂಕಿನ ಮಾವಿನಕುರ್ವೆ ಕಡಲತೀರದಲ್ಲಿ “ಪ್ಲೀಸ ಮೇಕ ಧ ರೈಟ್ ವೋಟ”, “ಮತದಾನ ಮಾಡೋಣ” ಭಿತ್ತಿಚಿತ್ರವನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ನಾವು ಮತದಾನ ಮಾಡುವೆವು ಇತರರಿಗೂ ಪ್ರೇರಣೆ ನೀಡುವೆವು ಎಂದು ಪ್ರತಿಜ್ಞೆ ಸ್ವೀಕರಿಸಿದರು. ಕಾಲೇಜು ಪ್ರಾಚಾರ್ಯರಾದ ಶ್ರೀನಾಥ ಪೈ ರವರು ಸ್ವೀಪ್ ಮೂಲಕ ಮತದಾನದ ಕುರಿತು ಆನಲೈನ್ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಮತದಾನದ ಅರಿವು ಜಾಥಾ ಮುಖೇನ ಮಾವಿನಕುರ್ವೆ ಗ್ರಾಮ ಪಂಚಾಯತ ವ್ಯಾಪ್ತಿಯ ಮನೆ, ಬಂದರು, ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಸರ್ವರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿಮಾಡಿದರು.
ಎನ್.ಎಸ್.ಎಸ್ ಘಟಕದ ಸಂಯೋಜಕ ಶಾಂತರಾಯ ಗೊಂಡ, ವಿನಾಯಕ ನಾಯ್ಕ, ಪ್ರಾದ್ಯಾಪಕರು, ತರಬೇತುದಾರರಾದ ಸೆಸಿಲಿಯಾ ಪಿಂಟೋ, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!