ಭಟ್ಕಳ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಹಾಡುವಳ್ಳಿ ಗ್ರಾಮದ ಲಕ್ಷ್ಮಣ್ ನಾಯ್ಕ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರಿಗೆ ಮನೆ ಕಟ್ಟಿಸಿಕೊಳ್ಳಲು ಅಸಹಾಯಕರಾಗಿದ್ದು ಅವರನ್ನು ಗುರುತಿಸಿ ಪ್ರತಿ ತಿಂಗಳು ರೂ1000 ದಂತೆ ಮಾಸಾಸನ ನೀಡುತ್ತಿದ್ದು ಅದರ ಜೊತೆಗೆ ಅವರಿಗೆ ವಾಸಿಸಲು ಒಂದು ಮನೆಯನ್ನು ರಚನೆ ಮಾಡಿ ಕೊಟ್ಟಿರುತ್ತಾರೆ. ಹಾಗೆ ಈ ವರ್ಷ ಮಂಕಿ ಬಾಲೆನವಾಡಿ ಗ್ರಾಮದ ರಮಾ ಇವರು 70 ವರ್ಷ ವಯಸ್ಸಾಗಿದ್ದು ದುಡಿಯಲು ಅಸಹಾಯಕರಾಗಿರುತ್ತಾರೆ ಇವರಿಗೆ ಮಕ್ಕಳು, ಗಂಡ ಯಾರು ಇಲ್ಲದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರತಿ ತಿಂಗಳು ರೂ 1000 ದಂತೆ ಮಾಸಾಸನ ನೀಡುತ್ತಿದ್ದು ಅದರ ಜೊತೆಗೆ ಅವರು ನೆಮ್ಮದಿಯಿಂದ ಜೀವನ ಸಾಗಿಸಲು ಅವರಿಗೊಂದು ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಈ ಮನೆಯನ್ನು ರಚಿಸಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಮಾನ್ಯ ಮಹೇಶ್ ಎಂಡಿ ಅವರು ರಮಾ ಅವರಿಗೆ ಹಸ್ತಾಂತರಿಸಿದರು.