ಆರ್.ಎನ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಯಾಗಿರುವ ಡಾ.ದಿನೇಶ್ ಗಾಂವ್ಕರ್ ಅವರು ಸಲ್ಲಿಸಿದ “ಆಧುನಿಕ ಕನ್ನಡ ಸಾಹಿತ್ಯದಲ್ಲಿ ಏಸುಕ್ರಿಸ್ತ” ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್(ಪಿ.ಎಚ್.ಡಿ) ಪದವಿ ಪ್ರಧಾನ ಮಾಡಿದೆ. ಪ್ರೊ.ಹೆಚ್.ಎಂ.ನಾಗೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧ ರಚನೆ ಮಾಡಿದ್ದಾರೆ. ಡಾ.ದಿನೇಶ್ ಗಾಂವ್ಕರ್ ಅವರು ಈ ಹಿಂದೆ ಹಾಸನದಲ್ಲಿ 20 ವರ್ಷ ಪ್ರಾಚಾರ್ಯರಾಗಿ, ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರಾಗಿ ಮತ್ತು ಶೈಕ್ಷಣಿಕ ಮಂಡಳಿ ಸದಸ್ಯರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಆರ್.ಎನ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಯಾಗಿ ಮತ್ತು ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿ ಮುರುಡೇಶ್ವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರಿಗೆ ಆಡಳಿತ ಮಂಡಳಿ, ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲಾ ಪ್ರಾಚಾರ್ಯರು, ಅಧ್ಯಾಪಕರು, ಸಮಸ್ತ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.