ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಚ್. ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿಗಣತಿಯನ್ನು ಫೆಬ್ರುವರಿ 29ರಂದು ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗಡೆಯವರು ವರದಿಯನ್ನು ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದ್ದರು. ಈ ವರದಿಯನ್ನು ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಈಡಿಗ ಸಮುದಾಯದ ಮುಖಂಡರು ತೀವ್ರ ವಿರೋಧಿಸಿದರಲ್ಲದೆ ಜಾತಿಗಣತಿಯ ವರದಿಯನ್ನು ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದರು. ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ಶಾಮನೂರ್ ಶಿವಶಂಕರಪ್ಪ ನವರು ಈ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಉದ್ದೇಶ ಪೂರಕವಾಗಿಯೇ ವೀರಶೈವ ಲಿಂಗಾಯತರನ್ನ ಸಮೀಕ್ಷೆಯಿಂದ ದೂರ ಇಡಲಾಗಿದೆ ಎಂದು ಹೇಳಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಮೀಕ್ಷೆ ಮಾಡಲು ನಮ್ಮ ಮನೆಗೆ ಯಾರು ಬಂದಿರಲಿಲ್ಲ ಎಂದು ಹೇಳಿದ್ದರು. ಈ ವರದಿಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರಾಸಗಟವಾಗಿ ವಿರೋಧಿಸಿದ್ದರು. ಮಾಜಿ ಸಚಿವ ವಿ ಸುನಿಲ್ ಕುಮಾರ್ ಅವರು ಕಾಂತರಾಜ್ ವರದಿಯ ಮೂಲ ಪ್ರತಿಯನ್ನು ಕದ್ದವರು ಯಾರು ಎಂದು ಸರಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದರು. ಈ ಎಲ್ಲಾ ಮುಖಂಡರ ವಿರೋಧವು ಒಂದೇ ಆಗಿದ್ದು, ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ ಉದ್ದೇಶ ಪೂರಕವಾಗಿ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬುದಾಗಿ ಲಿಂಗಾಯತರು ಒಕ್ಕಲಿಗ ಈಡಿಗ ಸಮಾಜದ ಆಕ್ಷೇಪಣೆ ಮತ್ತು ವಿರೋಧವಾಗಿತ್ತು. ಅದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಎಸ್ ಸಿ ಒಂದು ಕೋಟಿ, ಮುಸ್ಲಿಮರು 75 ಲಕ್ಷ ,ಲಿಂಗಾಯತರು 65 ಲಕ್ಷ, ಒಕ್ಕಲಿಗರು 60 ಲಕ್ಷ ಎಂದು ಹೀಗೆ ತಮಗೆ ತೋಚಿದ ರೀತಿಯಲ್ಲಿ ಅಂಕೆ ಅಂಶಗಳನ್ನು ಬಿಡಲು ಆರಂಭಿಸಿದರು. ಹೀಗಾಗಿ ಇದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಮುಖಂಡರ ಕೆಂಗಣ್ಣಿಗೆ ಈ ವರದಿ ಗುರಿಯಾಗಿತ್ತು. ಮುಸ್ಲಿಂ ಜನಸಂಖ್ಯೆಯಲ್ಲಿ ಹೆಚ್ಚಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರಲಾರಂಭಿಸಿತು. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮುಖಂಡರು ಈ ವರದಿಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತೇವೆ ಮತ್ತು ಈ ವರದಿಯನ್ನು ಜಾರಿಗೆ ಆಗಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು. ಇದೇ ಹೊತ್ತಿಗೆ ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತದೆ. ದೇವರ ದಯೆಯಿಂದ ಯಾವುದೇ ಪ್ರಾಣಪಾಯವಾಗಿರುವುದಿಲ್ಲ.NIA ಮತ್ತು ಕರ್ನಾಟಕ ಪೊಲೀಸ್ ಬ್ಲಾಸ್ಟ್ ಮಾಡಿದವನನ್ನು ಪತ್ತೆ ಹಚ್ಚುತ್ತಿದ್ದಾರೆ. ಗೃಹ ಮಂತ್ರಿಗಳು ತನಿಖೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿಯನ್ನು ಮುಖ್ಯಮಂತ್ರಿ ಮುಂದಿನ ದಿನಗಳಲ್ಲಿ ಜಾರಿ ಮಾಡಬಹುದು.
“ಆದರೆ ಜಾತಿ ಜನಗಣತಿಯ ವರದಿಯ ವಿರೋಧವನ್ನು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ನುಂಗಿ ಹಾಕಿದ್ದಂತೂ ಸತ್ಯ”