ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ೧೫ ದಿನಗಳ ರಾಷ್ಟಿçÃಯ ಮಟ್ಟದ ಡಾಟಾ ಅನಾಲಿಟಿಕ್ಸ್ ತರಬೇತಿಗೆ ಚಾಲನೆ ನೀಡಿದ
ಐ.ಸಿ.ಟಿ ಅಕಾಡೆಮಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿಷ್ಣು ಪ್ರಸಾದ ರವರು ೨೧ನೇ ಶತಮಾನದಲ್ಲಿ ತಂತ್ರಜ್ಞಾನ-ಕೌಶಲ್ಯವು ಅತಿಅವಶ್ಯಕ. ಸರ್ವರೂ ಪದವಿ ಹಂತದಲ್ಲಿಯೇ ಕೌಶಲ್ಯವನ್ನು ಅಭಿವೃದ್ಧಿಸಿಕೊಂಡು ಸಾಧನೆಗೆ ಕಾರಣವಾಗಬೇಕೆಂದು ಪ್ರೇರಣೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಐ.ಸಿ.ಟಿ ಅಕಾಡೆಮಿಯ ರಿಲೇಶನಶಿಪ್ ವ್ಯವಸ್ಥಾಪಕ ವಿಘ್ಞೇಶ ಶೆಟ್ಟಿಯವರು ಐ.ಸಿ.ಟಿ ಅಕಾಡೆಮಿಯ ಸದಸ್ಯತ್ವ ಪ್ರಮಾಣಪತ್ರವನ್ನು ಟ್ರಸ್ಟ್’ನ ಅಧ್ಯಕ್ಷರಾದ ಡಾ. ಸುರೇಶ ನಾಯಕರಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್’ನ ಅಧ್ಯಕ್ಷರಾದ ಡಾ. ಸುರೇಶ ನಾಯಕ ರವರು ಸಿ.ಎಸ್.ಆರ್ ಪ್ರಾಜೋಜಕತ್ವ ನೀಡಿದ ಪೇ-ಪಾಲ್ ಸಂಸ್ಥೆಗೆ ಧನ್ಯವಾದ ತಿಳಿಸುತ್ತಾ “ಇಂತಹ ವಿಶೇಷ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು” ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿ,” ಕರ್ನಾಟಕದ ಆಯ್ದ ಕಾಲೇಜಿನಲ್ಲಿ ಈ ತರಬೇತಿ ಜರುಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಗೆ ಇದು ಹೆಮ್ಮೆಯ ಸಂಗತಿ” ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಡಾಟಾ ಅನಾಲಿಟಿಕ್ಸ್ ತರಬೇತುದಾರ ಮಾಧವೇಂದ್ರ ಸಿಂಗ್, ಕಂಪ್ಯೂಟರ ವಿಭಾಗದ ಉಪನ್ಯಾಸಕರು, ಸಿಬ್ಬಂದಿಗಳು, ಸೂಪರ ೬೦ ಡಾಟಾ ಅನಾಲಿಸ್ಟ್÷್ಸ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಬಿ.ಸಿ.ಎ ವಿಭಾಗದ ಉಪಪ್ರಾಂಶುಪಾಲ ವಿಖ್ಯಾತ ಪ್ರಭು ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕುಮಾರಿ ಪ್ರೇರಣಾ ಶೇಟ ನಿರೂಪಿಸಿದರು.
