ಐ.ಸಿ.ಎ.ಐ. ನಡೆಸಿದ 2023ನೇ ಸಾಲಿನ ರಾಷ್ಟ್ರಮಟ್ಟದ ಸಿ.ಎ ಫೌಂಡೇಶನ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,
ಆರ್.ಎನ್.ಶೆಟ್ಟಿ ಪದವಿಪೂರ್ವ ಮಹಾವಿದ್ಯಾಲಯ ಮುರುಡೇಶ್ವರದಲ್ಲಿ ವ್ಯಾಸಂಗ ಮಾಡಿದ್ದ ಕು.ಪ್ರಶಾಂತ್ ಪಟಗಾರ ಹಾಗೂ ಕು.ರಿಷಿಕೇಶ್ ಶೆಟ್ಟಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಕು.ಸಂದೇಶ್ ಶೆಟ್ಟಿ ಕಳೆದ ಆಗಸ್ಟ್ ನಲ್ಲಿ ಸಿ.ಎ ಫೌಂಡೇಶನ್ ಪರೀಕ್ಷೆ ತೇರ್ಗಡೆ ಹೊಂದಿದ್ದು ದ್ವಿತೀಯ ಪಿಯುಸಿಯಲ್ಲಿಯೂ ಉತ್ತಮ ಅಂಕವನ್ನುಗಳಿಸಿ ರಾಜ್ಯಕ್ಕೆ 8ನೇ ಸ್ಥಾನವನ್ನು ಪಡೆದಿದ್ದ ವಿದ್ಯಾರ್ಥಿಯಾಗಿದ್ದಾನೆ. ಈ ಮೂವರು ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಸಿ.ಎ ಫೌಂಡೇಶನ್
ಪರೀಕ್ಷೆ ತೇರ್ಗಡೆಗೊಂಡಿದ್ದು ಇವರಿಗೆ ಆರ್.ಎನ್.ಎಸ್ ಆಡಳಿತ ಮಂಡಳಿ, ಆರ್.ಎನ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರೊ. ದಿನೇಶ್ ಗಾಂವ್ಕರ್, ಪ್ರಾಚಾರ್ಯೆ ಶ್ರೀಮತಿ ಅಶ್ವಿನಿ ಶೇಟ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.