ಕೂಡ್ಲಿಗಿ:ನುಡಿದಂತೆ ನಡೆದ ಶಾಸಕ ಡಾ”ಎನ್.ಟಿ.ಶ್ರೀನಿವಾಸ್-ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ತಾವು ಮೂರುದಿನದ ಹಿಂದೆಯಷ್ಟೇ ಗ್ರಾಮಸ್ಥರಿಗೆ ಕೊಟ್ಟ ಭರವಸೆಯಂತೆ. ಗ್ರಾಮದಲ್ಲಿನ ದೇವರ ಎತ್ತುಗಳಿಗೆ ಮೇವು ಒದಗಿಸಿದ್ದಾರೆ, ಈ ಮೂಲಕ ಅವರು ಎತ್ತುಗಳ ಪಾಲಿಗೆ ಹಾಗೂ ಜನತೆಗೆ ” ಕೊಟ್ಟ ಮಾತಿಗೆ ತಪ್ಪಿ ನಡೆಯದ ಪುಣ್ಯಕೋಟಿ ” ಯಾಗಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಕೆ. ದಿಬ್ಬದಹಳ್ಳಿ ಗ್ರಾಮಕ್ಕೆ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಫೆ 08ರಂದು ” ದೇವರ ಹಟ್ಟಿ ಜಾತ್ರೆಯಲ್ಲಿ ” ಪಲ್ಗೊಂಡಿದ್ದರು. ತಾಲೂಕಿನ ಸಮಸ್ಥ ಜನತೆಗೆ ಮತ್ತು ನಾಡಿನ ಜನರ ಒಳಿತಿಗಾಗಿ ಅವರು, ದೆರವರಲ್ಲಿ ವಿಶೇಷ ಪೂಜೆ ಸಲ್ಲಿಸಿ ಜನರ ಕಷ್ಟಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ
ದೇವರ ಎತ್ತುಗಳು, ಅಗತ್ಯ ಮೇವು ನೀರು ಇಲ್ಲದೇ ಸಂಕಷ್ಟದ ಸ್ಥಿತಿಯಲ್ಲಿರುವುದು ಶಾಸಕರಿಗೆ ತಿಳಿಯಿತು. ಶಾಸಕರು ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿದರು, ಅಧಿಕಾರಿಯಿಂದ ಗೋಶಾಲೆಗಳು ತೆರೆಯುವುದು ತಡವಾಗಬಹುದೆಂದು ಮನವರಿಕೆಯಾಯಿತು. ಕೂಡಲೇ ಶಾಸಕರು ದೇವರ ಎತ್ತುಗಳಿಗೆ, ತಾವು ಶೀಘ್ರವೇ ಅಗತ್ಯ ಮೇವು ಒದಗಿಸಿಕೊಡುವುದಾಗಿ ಭರವಸೆ ಕೊಟ್ಟರು. ಅಂತೆಯೇ ಶಾಸಕರು ಕೊಟ್ಟ ಮಾತಿಗೆ ತಪ್ಪದೇ, ದೇವರ ಎತ್ತುಗಳಿಗೆ ಫೆ11ರಂದು ಭಾರೀ ಪ್ರಮಾಣದಲ್ಲಿ ಮೇವು ಒದಗಿಸಿಕೊಟ್ಟರು. ಅವರು ಈ ಮೂಲಕ ಕ್ಷೇತ್ರದ ಜನರ ಪ್ರೀತಿ, ಮತ್ತು ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅವರು ಅಧಿವೇಶನದಲ್ಲಿ ಇದ್ದರೂ ಕೂಡ, ಕ್ಷೇತ್ರದಲ್ಲಿ ಕೆಲಸ ನಿಲ್ಲಬಾರದೆಂದು ಮುಖಂಡರಿಗೆ ಮನವಿ ಮಾಡಿ ಮೇವಿಗೆ ವ್ಯವಸ್ಥೆಮಾಡಿದ್ದಾರೆ. ಶಾಸಕರು ಮೇವನ್ನು ದೇವರ ಎತ್ತುಗಳಿಗೆ ಒದಗಿಸಿದ ಸಂದರ್ಭದಲ್ಲಿ, ಮುಖಂಡರಾದ ಗುರುಸಿದ್ದನ ಗೌಡ್ರು, ಮಲ್ಲಿಕಾರ್ಜುನ ಗೌಡ್ರು, ಕಾವಲಿ ಶಿವಪ್ಪ , ಕಂಪ್ಯೂಟರ್ ರಾಘು, ದಿಬ್ಬದಹಳ್ಳಿ ಎರ್ರಿಸ್ವಾಮಿ, ಹಾಗೂ ಶಾಸಕರ ಆಪ್ತ ಸಹಾಯಕರಾದ ಮರಳುಸಿದ್ದಪ್ಪ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಕೂಡ, ದೇವರ ಎತ್ತುಗಳಿಗೆ ಸೂಕ್ತ ಸಂರಕ್ಷಣೆ ಸಂಪೋಷಣೆಗೆ ಅಗತ್ಯ ಕ್ರಮಕ್ಕಾಗಿ ಧ್ವನಿ ಎತ್ತಿದ್ದಾರೆ. ಶಾಸಕರು ಕ್ಷೇತ್ರದ ಪ್ರತಿ ಊರೂರು ಸುತ್ತಿ, ಗ್ರಾಮಸ್ಥರ ಕೊಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಹಾಗೂ ಜನರ ಕೆಲ ಸಮಸ್ಯೆಗಳನ್ನು, ಸ್ಥಳದಲ್ಲಿಯೇ ಬಗೆಹರಿಸುತ್ತಿದ್ದರು. ದೇವರ ಎತ್ತುಗಳು ಮೇವು ಮತ್ತು ನೀರು ಇಲ್ಲದೇ ಬಳಲಿರುವುದನ್ನು ಕಂಡ ಶಾಸಕರು, ತಾಲೂಕಿನ ಕೆ.ಡಿ.ಪಿ ಸಭೆಯಲ್ಲಿ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಂತೆ, ಸಂಬಂಧಿಸಿದ ಅಧಿಕಾರಿಗಳಲ್ಲಿ ಸೂಚಿಸಿದ್ದರು.
ಸರ್ಕಾರದಿಂದ ದೇವರ ಎತ್ತುಗಳಿಗೆ ಮೇವು ನೀರು ಒದಗಿಸಲು, ಕಾನೂನು ಅಡಿಯಲ್ಲಿ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಕ್ಷೇತ್ರದಲ್ಲಿ ಸುಮಾರು 1000 ದೇವರ ಎತ್ತುಗಳು ಇರುವುದನ್ನು ಕಂಡ ಶಾಸಕರು, ಬೆಳಗಾವಿ ಅಧಿವೇಶನದಲ್ಲಿ ಸಂಬಂಧಿಸಿದಂತೆ ಧ್ವನಿ ಎತ್ತಿ, ಸರ್ಕಾರದ ಗಮನ ಸೆಳೆದಿದ್ದು ಈ ಮೂಲಕ ಅವರಲ್ಲಿನ ಕಾಳಜಿ ವ್ಯಕ್ತವಾಗಿದೆ. ಅದಕ್ಕಾಗಿ ಕೂಡ್ಲಿಗಿ ಪಟ್ಟಣದ ನಾಗರೀಕರು, ತಾಲೂಕಿನ ಸಮಸ್ತ ಜನತೆ ಶಾಸಕರ ಹೃದಯ ಶ್ರೀಮಂತಿಕೆಗೆ ಫಿದಾ ಆಗಿರುವುದಂತು ಸತ್ಯ..✍ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428
ಕೂಡ್ಲಿಗಿ:ನುಡಿದಂತೆ ನಡೆದ ಶಾಸಕ ಡಾ”ಎನ್.ಟಿ.ಶ್ರೀನಿವಾಸ್
