ಕಾರವಾರ: ಕಾರವಾರ ಇಳಕಲ್ ರಸ್ತೆ ನಗರದ ಗೀತಾಂಜಲಿ ಚಿತ್ರಮಂದಿರದಿಂದ ಹಬ್ಬುವಾಡ ರಸ್ತೆಯೂ, ಕಾರವಾರ ಅಂಕೋಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಮಾನ್ಯ ಶ್ರೀಮತಿ ರೂಪಾಲಿ ಸಂತೋಷ ನಾಯ್ಕರವರ ಅವಧಿಯಲ್ಲಿ ಸೆಂಕ್ಷನ್ ಆಗಿ ಕಾಮಗಾರಿ ಆರಂಭವಾಗಿ ಸಿಮೆಂಟ್ ರಸ್ತೆ ಪೂರ್ಣ ಗೊಂಡಿತ್ತು, ಅದರ ಮುಂದಿನ ಕಾಮಗಾರಿ ಡಿವೈಡರ್ ,ಸ್ಲಾಬ್ ಹಾಕುವುದು ಮತ್ತು ವಿದ್ಯುದ್ದೀಪ ಅಳವಡಿಸುವುದು ಬಾಕಿ ಇದ್ದಿತ್ತು. ಆದರೆ ಈಗ ಒಂದು ವರ್ಷ ಮುಗಿಯುತ್ತಾ ಬಂದರೂ ಕಾಮಗಾರಿ ಆರಂಬಿಸದೆ ನಿರ್ಲಕ್ಷಿಸಿರುತ್ತಿರುವುದ್ದನ್ನು ಖಂಡಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಅದಕ್ಕೆ ಇಂದು ಸಂಬಂಧಿಸಿದ ಗುತ್ತಿಗೆದಾರರು ಮತ್ತು ಇಲಾಖೆಯ ಅಧಿಕಾರಿಗಳು ಡಿವೈಡರ್ ಹಾಕುವ ಮಧ್ಯದಲ್ಲಿ ಸಿಮೆಂಟ್ ಲೆಪ ಹಾಕಿಸಿ ಮುಚ್ಚುತ್ತಿರುವುದನ್ನು ರೂಪಾಲಿ ನಾಯ್ಕ್ ರವರು ಹಾಗೂ ಸಾರ್ವಜನಿಕರು, ನಗರಸಭೆಯ ಸದಸ್ಯರು,ನಡೆಯುತ್ತಿರುವ ಕೆಲಸವನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು. ದಿವೈಡರ್ ವಿದ್ಯುದ್ದೀಪ ಹಾಗೂ ಚರಂಡಿ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸದಿದ್ದಲ್ಲಿ ಮತ್ತೊಮ್ಮೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಎಚ್ಚರಿಕೆ ನೀಡಿದ್ದರು. ರಸ್ತೆ ನಿರ್ಮಾಣ ಕಾರ್ಯ ಮುಕ್ತಾಯವಾದರೂ ಚರಂಡಿಗೆ ಸ್ಯಾಬ್ ಹಾಕಿ ಮುಚ್ಚುವುದು, ಡಿವೈಡರ್ ನಿರ್ಮಾಣ, ವಿದ್ಯುದ್ದೀಪ ಅಳವಡಿಸುವ ಕಾಮಗಾರಿ ವಿಳಂಬವಾಗಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗ್ತಾ ಇದೆ. ಹಬ್ಬುವಾಡ ರಸ್ತೆಯ ಡಿವೈಡರ್ ನಲ್ಲಿ ವಿದ್ಯುತ್ ದೀಪ ಅಳವಡಿಸಲು ಒಟ್ಟೂ 3 ಕೋಟಿ ರೂ.ಗಳ ರಸ್ತೆಯಲ್ಲಿ 27 ಲಕ್ಷ ರೂ. ಇಡಲಾಗಿದೆ. ಹಬ್ಬುವಾಡ ರಸ್ತೆಯ ಚರಂಡಿ ನಿರ್ಮಾಣಕ್ಕೆ ಅಗತ್ಯ ಹಣ ಇದ್ದರೂ ಈ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ. ಚರಂಡಿಗೆ ಸಿಮೆಂಟ್ ಹಲಗೆಯನ್ನು ಶೀಘ್ರದಲ್ಲಿ ಮುಚ್ಚುವ ಅವಶ್ಯಕತೆ ಇದೆ. ಚಿಕ್ಕಮಕ್ಕಳು, ಮಹಿಳೆಯರು, ಜನತೆಗೆ ಸುರಕ್ಷಿತ ಓಡಾಟಕ್ಕೆ ಅವಕಾಶ ಒದಗಿಸಬೇಕಾಗಿದೆ. ಈ ರಸ್ತೆಯ ಪಕ್ಕದಲ್ಲಿ 300 ಮೀ.ಚರಂಡಿ ನಿರ್ಮಾಣ ಆಗಿದೆ. ಆದರೆ ಸ್ಲಾಬ್ ಹಾಕುವ ಕಾರ್ಯ ಬಾಕಿ ಉಳಿದಿದೆ. ಚರಂಡಿನಿರ್ಮಾಣಕ್ಕೆ 1 ಕೋಟಿ ರೂ. ಹಣ ಸಹ ಬಿಡುಗಡೆಯಾಗಿದೆ. ಈ ಕೂಡಲೇ ಈ ಎಲ್ಲ ಕಾಮಗಾರಿ ಪೂರ್ಣಗೊಳಿಸುವಂತೆ ಹಾಗೂ ಮುಂದೆ ಎಪಿಎಂಸಿ ತನಕರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೂಪಾಲಿ. ಎಸ್.ನಾಯ್ಕ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಕಾರವಾರದ ನಗರಸಭೆಯ ಸಾಯಿ ಸಮಿತಿ ಅಧ್ಯಕ್ಷ ಹಾಗೂ ನಗರ ಸಭೆಯ ಸದಸ್ಯರು, ಬಿಜೆಪಿ ನಗರದ ಅಧ್ಯಕ್ಷರು,ಪದಾಧಿಕಾರಿಗಳು,ಪ್ರಮುಖರು,ನಾಗರಿಕರು ಭಾಗವಹಿಸಿದ್ದರು.