
ಸಹಾಯಕ ಆಯುಕ್ತರಾದ ನಯನಾರವರು ಭಟ್ಕಳ ವಿಧಾನಸಭಾ ಕ್ಷೇತ್ರದ ವಿಶೇಷ ಪರಿಷ್ಕರಣಾ-2024ರ ಅಂತಿಮ ಮತದಾರರ ಪಟ್ಟಿ ಯನ್ನ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯವರಿಗೆ ಹಸ್ತಾಂತರಿಸಿದರು. ನಂತರದಲ್ಲಿ ಅವರು ತಮ್ಮ ಕಛೇರಿಯ ಉಪಸ್ಥಿತರಿದ್ದ ವಿವಿಧ ಪಕ್ಷದ ವಕ್ತಾರೊಂದಿಗೆ ಮಾತನಾಡಿ ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ ಭಟ್ಕಳ ವಿಧಾನಸಭಾ ಚುನಾವಣೆಯ ಅಂತಿಮ ಮತದಾರರ ಪಟ್ಟಿಯನ್ನ ಬಿಡುಗಡೆಗೊಳಿಸಿದ್ದು, 114053 ಪುರುಷ ಮತದಾರರು ಮತ್ತು 111075 ಮಹಿಳಾ ಮತದಾರರು ಸೇರಿ ಒಟ್ಟಾರೆ 225128 ಮತದಾರರು ತಮ್ಮ ಹೆಸರನ್ನು ನೊಂದಾಯಿಸಿ ಕೊಂಡಿದ್ದಾರೆ. ಮತದಾರರ ವಿಶೇಷ ಪರಿಷ್ಕರಣೆಯಲ್ಲಿ ವಿವಿಧ ಕಾರಣಗಳಿಂದ 2740 ಮತದಾರರ ಹೆಸರನ್ನ ತೆಗೆಯಲಾಗಿದೆ, 4434 ಹೆಸರನ್ನ ತಿದ್ದುಪಡಿ ಮಾಡಲಾಗಿದೆ, 1799 ಹೆಸರನ್ನ ಸೇರ್ಪಡೆಗೊಳಿಸಲಾಗಿದೆ. ತಿದ್ದುಪಡಿ ಅಥವಾ ಬದಲಾವಣೆಗೆ ಅವಕಾಶವಿದ್ದು ಭಟ್ಕಳ ವಿಧಾನಸಭಾ ಕ್ಷೇತ್ರದ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮತ್ತು ವಿಳಾಸವನ್ನ ಪರಿಶೀಲಿಸಿ ಬದಲಾಣೆ ಇದ್ದಲ್ಲಿ ನೇರವಾಗಿ ತಾಲೂಕಾ ಚುನಾವಣಾ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ.