ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನ
ಮುರ್ಡೇಶ್ವರದ ಆರ್.ಎನ್.ಎಸ್ ವಿದ್ಯಾನಿಕೇತನ ಸಿ.ಬಿ.ಎಸ್.ಇ ಶಾಲೆಯ ಸ್ಕೌಟ್
ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ “ರಸ್ತೆ
ಸುರಕ್ಷತಾ ಸಪ್ತಾಹ” ಜಾಥಾವನ್ನು ಶಾಲೆಯಿಂದ ಆರಂಭಿಸಿ ಮುರ್ಡೇಶ್ವರದ ನಾಕಾ
(ಗೇಟ್)ದವರೆಗೆ ಹಮ್ಮಿಕೊಂಡರು.
ಈ ಜಾಥಾದಲ್ಲಿ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ನಾಮಫಲಕವನ್ನು ಹಿಡಿದು
ಘೋಷಣೆಗಳೊಂದಿಗೆ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಈ
ಜಾಥಾದಲ್ಲಿ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ಸ್ಕೌಟ್ & ಗೈಡ್ಸ್ ಶಿಕ್ಷಕರಾದ ಶ್ರೀ
ದೇವಿದಾಸ ನಾಯ್ಕ, ಶ್ರೀಮತಿ ವೀಣಾ ಮೊಗೇರ ಹಾಗೂ ಶಿಕ್ಷಕರಾದ ಶ್ರೀ ಗಣೇಶಾಂಬ ನಾಯ್ಕ,
ಶ್ರೀಮತಿ ಪ್ರಿಯಾಂಕ ನಾಯ್ಕ ಉಪಸ್ಥಿತರಿದ್ದರು. ಮುರುಡೇಶ್ವರ ಪೋಲಿಸ್ ಠಾಣೆಯ
ಎ.ಎಸ್.ಐಗಳಾದ ಶ್ರೀ ಸುರೇಂದ್ರ ಅಲಗೇರಿಕರ್, ಶ್ರೀ ರುದ್ರೇಶ ನೇತ್ರಾಣಿ, ಶ್ರೀ ಅಂಥೋನಿ
ಫೆರ್ನಾಂಡಿಸ್ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.