ಜನ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಸ್ನೇಹ ಯುವಕ ಸಂಘ

Share


ಭಟ್ಕಳ:ಒಂದು ಸಮಯದಲ್ಲಿ ಎಲ್ಲಿ ನೋಡಿದರೂ ಯುವಕ ಸಂಘ ರಾಶಿ ರಾಶಿ ಹುಟ್ಟಿ ನಶಿಸಿ ಹೋದ ಉದಾರಣೆಗಳು ತುಂಬಾ ಇದೆ ಇಂಥ ಸಂದರ್ಭದಲ್ಲಿ ಕೋಟದಮಕ್ಕಿ ಗ್ರಾಮ ದಲ್ಲಿರುವ ಸ್ನೇಹ ಯುವಕ ಸಂಘ 17ನೇ ವರ್ಷದ ಗಡಿಯಲ್ಲಿ ಇದೆ. ಇದು ನೆಪ ಮಾತ್ರಕ್ಕೆ ಸಂಘ ಇರದೇ ನಿರಂತರ ವಾರ್ಷಿಕೋತ್ಸವ ಸಮಯದಲ್ಲಿ
ಸಾಧಕರಿಗೆ ಸನ್ಮಾನ, ಯೋಧರಿಗೆ ಗೌರವ ಮತ್ತು ಕೃಷಿ ಸಾಧಕರಿಗೆ ಸನ್ಮಾನ, ಕ್ರೀಡಾ ಸಾಧಕರಿಗೆ ಸನ್ಮಾನ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ನಿರಂತರ ಶಾಲೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಗ್ರಾಮಸ್ಥರ ಜೊತೆ ಸೇರಿ ಗಡಿಯಿಂದ ಮರಳಿ ಮನೆಗೆ ಬಂದ ಯೋಧನನ್ನು ಭವ್ಯ ಸ್ವಾಗತ ಮಾಡಿದ ಶ್ರೇಯಸ್ಸು ಸ್ನೇಹ ಯುವಕ ಸಂಘ ಮತ್ತು ಗ್ರಾಮಸ್ಥರಿಗೆ ಸೇರುತ್ತದೆ ಇಂತಹ ಅನೇಕ ಕೆಲಸಗಳನ್ನು ಆ ಸಮಯಕ್ಕೆ ಇದ್ದ ಅಧ್ಯಕ್ಷರ ಮುಂದಾಳತ್ವದಲ್ಲಿ ಸಂಘ ಮಾಡುತ್ತಾ ಬಂದಿದೆ ಮುಂದು ಕೂಡ ಇದೇ ರೀತಿ ಸಂಘ ವಿಶೇಷ ಕೆಲಸಗಳನ್ನು ಮಾಡುತ್ತಾ ಮುಂದುವರೆಯಬೇಕಿದೆ. ಅದಲ್ಲದೆ ಸಂಘ ಇನ್ನೂ ಅನೇಕ ಕೆಲಸಗಳನ್ನು ಮಾಡಬೇಕಾಗಿದೆ.

ರಸ್ತೆ ಬದಿಯಲ್ಲಿ ಬಿದ್ದಿರುವ ತರಕಾರಿ ಸಿಪ್ಪೆಯ ರಾಶಿಗಳು

ಗ್ರಾಮಕ್ಕೆ ಬರುವ ರಸ್ತೆಯಲ್ಲಿ ನಡೆದು ಬರುವಂತ ದಾರಿಹೋಕರಿಗೆ ಮೂಗು ಮುಚ್ಚಿಕೊಂಡು ಬರುವಂತ ಪರಿಸ್ಥಿತಿ ಇದೆ. ರಸ್ತೆ ಬದಿಯಲ್ಲಿ ಹೋಟೆಲ್ ಮತ್ತು ತರಕಾರಿ ಅಂಗಡಿಗಳ ತ್ಯಾಜ್ಯ ದಿನನಿತ್ಯ ಸುರಿದು ಹೋಗುತ್ತಿದ್ದಾರೆ ಇದರ ಬಗ್ಗೆ ಸಂಘ ಹಿಂದೆ ಹೋರಾಟ ಮಾಡಿತ್ತು ಆದರೆ ಜಾಸ್ತಿ ಒತ್ತು ಕೊಡದ ಕಾರಣ ಇಂದು ಅದು ಜಾಸ್ತಿ ಆಗಿ ಕಸದ ಗುಡ್ಡೆಯಾಗಿ ಪರಿವರ್ತನೆ ಆಗುತ್ತಿದೆ.

ರಸ್ತೆ ಪಕ್ಕದಲ್ಲಿ ರಾಶಿ ರಾಶಿ ಬಿದ್ದಿರುವ ಮಧ್ಯದ ಖಾಲಿ ಬಾಟಲಿಗಳು

ಅದಕ್ಕಾಗ ಸಂಘವು ವಾರ್ಷಿಕೋತ್ಸವ ಸಂದರ್ಭದಲ್ಲಿ ಪಂಚಾಯತ್ ಮೆಂಬರ್ ಮತ್ತು ಸಂಬಂಧಪಟ್ಟಅಧಿಕಾರಿ ವರ್ಗದವರಿಗೆ ಮನವಿ ಮಾಡಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸಿ ಕೊಡಬೇಕಾಗಿದೆ. ಕೋಟದಮಕ್ಕಿಗೆ ಬರುವ ರಸ್ತೆ ಕಸಮುಕ್ತ ರಸ್ತೆ ಮಾಡ ಬೇಕಾಗಿದೆ, ಸ್ನೇಹ ಯುವಕಸಂಘ ಹಿಂದೆ ಮಾಡಿದ ಹೋರಾಟದ ಫಲ ವಾಗಿ ಇಂದು ರಸ್ತೆ ಬದಿಯಲ್ಲಿ ಕುಳಿತು ಮಧ್ಯ ಸೇವನೆ ಮಾಡುವವರ ಪ್ರಮಾಣ ಕಡಿಮೆಯಾಗಿದೆ. ಇದಕ್ಕೂ ಕೂಡ ಶಾಶ್ವತ ಪರಿಹಾರ ಸಿಗಬೇಕಾಗಿದೆ.

ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!