ಶಿರಾಲಿ ಗ್ರಾಮಕ್ಕೆ ಕೀರ್ತಿ ತಂದ ಪೃಥ್ವಿರಾಜ್

Share

ಭಟ್ಕಳ: ಭಟ್ಕಳ ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡಿಹಿತ್ತಲ್ಲ ನಿವಾಸಿಯಾದ ಪೃಥ್ವಿರಾಜ್ ನಾಯ್ಕ್ ಅವರು ಪ್ರತಿಷ್ಠಿತ ಕಂಪನಿಯ ಸೆಕ್ರೆಟರಿ (ಸಿ. ಎಸ್) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಇವರು ಶಿರಾಲಿಯ ಉದ್ಯಮಿಯಾದ ಪಾಂಡುರಂಗ ನಾಯ್ಕ್ ಹಾಗೂ ರತ್ನ ನಾಯ್ಕ್ ದಂಪತಿಯ ಪುತ್ರನಾದ ಪೃಥ್ವಿರಾಜ್ ಪ್ರಾಥಮಿಕ ಹಂತದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು.

ತಮ್ಮ ಪಿಯುಸಿ ಶಿಕ್ಷಣವನ್ನು ಭಟ್ಕಳದ ಆನಂದಾಶ್ರಮ ಪಿ.ಯು ಕಾಲೇಜಿನಲ್ಲಿ ಪೂರೈಸಿದ ಇವರು, ಬಳಿಕ ಉಡುಪಿಯ ತ್ರಿಶಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದಾರೆ. ಸತತ ಪರಿಶ್ರಮದ ಫಲವಾಗಿ ಇದೀಗ ಕಠಿಣವಾದ ಸಿ.ಎಸ್ ಪರೀಕ್ಷೆಯಲ್ಲಿ ಯಶಸ್ಸು ಕಂಡು ಪೋಷಕರಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುತ್ತಾರೆ.
ಇವರ ಈ ಸಾಧನೆಗೆ ಅವರ ಪಾಲಕರು, ಆನಂದಾಶ್ರಮ ಹಾಗೂ ತ್ರಿಶಾ ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಅಭಿನಂದಿಸಿರುತ್ತಾರೆ.
ಅತ್ಯುನ್ನತ ಹುದ್ದೆಯತ್ತ ಹೆಜ್ಜೆ ಇಟ್ಟಿರುವ ಪೃಥ್ವಿರಾಜ್ ಯುವ ಪ್ರತಿಭೆಗಳಿಗೆ ಒಂದು ಪ್ರೇರಣೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!