ಭಟ್ಕಳ: ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿಯಮಿತ ಶಿರಾಲಿ ಇದರ ರಜತ ಮಹೋತ್ಸವ ಹಾಗೂ ಸ್ವಂತ ಕಟ್ಟಡದ ಉದ್ಘಾಟನಾ ಸಮಾರಂಭವು ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳ ದಿವ್ಯ ಹಸ್ತದಿಂದ ಬುಧವಾರದಂದು ಇಲ್ಲಿನ ಶ್ರೀಮದ್ ಶ್ರೀ ಪಾಂಡುರಂಗ ಆಶ್ರಮ ಸ್ವಾಮಿ ಮಾರ್ಗ ಶಿರಾಲಿಯಲ್ಲಿ ನೂತನ ಕಟ್ಟಡವನ್ನು ಹೊಸ ಕಟ್ಟಡ ಲೋಕಾರ್ಪಣೆಗೊಂಡಿತು.

ನಂತರ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಆರ್ಶೀವಚನ ನೀಡಿ ಮಾತನಾಡಿದ್ದು “ಮಾರುತಿ ಚಿಹ್ನೆಯೇ ಈ ಬ್ಯಾಂಕನ ಶ್ರೇಯಸ್ಸು ಸಿಗಲು ಸಾಧ್ಯ.. ಹನುಮಂತ ಇದ್ದಲ್ಲಿ ಭಯ ಬೇಡ. ನಮ್ಮದು ಆಧ್ಯಾತ್ಮಿಕದ ಚಿಂತನೆಯಲ್ಲಿ ಮಾರುತಿ ಬ್ಯಾಂಕನ್ನು ಅದರ ಚಿಹ್ನೆಯನ್ನು ಹನುಮನ ದ್ರಷ್ಟಿಕೋನದಿಂದ ನೋಡಿದ್ದೇವೆ. ಹನುಮನ ಮತವೇ ಹರಿಯ ಮತವು ಹನುಮನ ಮತವೇ ಈ ಬ್ಯಾಂಕನಲ್ಲಿ ಜನರ ಮತವಾಗಿದೆ ಎಂದ ಅವರು ಸಹಕಾರಿಯಲ್ಲಿ ಸಾಲಗಾರರು, ಠೇವಣಿದಾರರು, ಆಡಳಿತ ಮಂಡಳಿ ಹಾಗೂ ಬ್ಯಾಂಕನ ಸಿಬ್ಬಂದಿಗಳೆಲ್ಲರು ಬಹು ಮುಖ್ಯ ಇವೆಲ್ಲರವು ಸೇರಿದಾಗ ಮಾತ್ರ ಒಂದು ಉತ್ತಮ ಸಹಕಾರಿ ಬ್ಯಾಂಕು ನಿರ್ಮಾಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯ.

ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಸವೇ ಪ್ರಧಾನವಾದದ್ದು. ಆಡಳಿತ ಮಂಡಳಿಯ ಶ್ರಮ, ಸಿಬ್ಬಂದಿ ವರ್ಗದ ಕೆಲಸ, ಠೇವಣಿದಾರರ ಆಸಕ್ತಿ, ಸಾಲ ಸೌಲಭ್ಯಗಳಿಲ್ಲವು ಇರುವುದು ಒಂದು ವಿಶ್ವಾಸ ನಂಬಿಕೆಯ ಮೇಲೆ ಎಂಬುದು ಯಾರು ಮರೆಯಬಾರದು. ಸೇವಾ ಭಾಗ ಅತ್ಯುತ್ತಮವಾದ ವಿಚಾರವಾಗಿದೆ. ಸಹನೆ, ವಿಶ್ವಾಸ ಬ್ಯಾಂಕ್ ಕೆಲಸದಲ್ಲಿ ಮುಖ್ಯ. ಬ್ಯಾಂಕ್ ಸಿಬ್ಬಂದಿಗಳು ಸಹ ಮ್ರದು ಸ್ವಭಾವ, ಸಹನೆ, ಗ್ರಾಹಕರಿಗೆ ನೀಡುವ ಮಾಹಿತಿ ಅದರ ವಿವರಣೆ ಸದಸ್ಯರ ಹೆಚ್ಚಳಕ್ಕೆ ಸಾಧ್ಯ.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ ’25 ವರ್ಷ ಈ ಬ್ಯಾಂಕ ಉತ್ತಮ ಸೇವೆ ಸಲ್ಲಿಸಿರುವುದು ಇದರ ಪ್ರಗತಿ ನಮ್ಮೆಲ್ಲರಿಗೂ ಹೆಮ್ಮೆ ಗೌರವ ತಂದಿದೆ. ನಾನು ಸಹಕಾರಿ ಬ್ಯಾಂಕನ ಅಧ್ಯಕ್ಷ, ರಾಜ್ಯ ಸಹಕಾರಿ ಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಅಂದೆಲ್ಲ ಉತ್ತಮವಾಗಿದ್ದ ಪರಿಸ್ಥಿತಿ ಇತ್ತೀಚಿನ ದಿನದಲ್ಲಿ ಕೆಲ ಸಹಕಾರಿ ಬ್ಯಾಂಕುಗಳು ರೋಗಗ್ರಸ್ಥವಾಗಿದೆ. ಈಗಿನ ಸಹಕಾರಿ ಬ್ಯಾಂಕ್ ಪಾರದರ್ಶಕವಾಗಿಲ್ಲದ ಕೆಲಸದಿಂದ ಸಂಕಷ್ಟ ಎದುರಿಸುತ್ತಿದೆ. ಆದರೆ ಜಿಲ್ಲೆಯಲ್ಲಿಯೇ ಉತ್ತಮವಾದ ಬ್ಯಾಂಕಗಳಿವೆ. ಅದರಲ್ಲಿ ಈ ಮಾರುತಿ ಬ್ಯಾಂಕ್ ಸಹ ಒಂದು. ವಿಶೇಷವೆಂದರೆ ಈ ಬ್ಯಾಂಕನಲ್ಲಿ ಸಾಲವನ್ನು ಬೇರೆ ಬ್ಯಾಂಕನಿಂದ ಪಡೆಯದೇ ಬೇರೆ ಕಡೆ ಸಾಲ ನೀಡುವ ತಾಕತ್ತಿದೆ. ಕಾರಣ ಒಳ್ಳೆಯ ಜನರನ್ನು ಆರಿಸಿ ಬ್ಯಾಂಕ ಉಳಿಸಿದ್ದೀರಿ. ರಾಜಕೀಯ, ಸಾಮಾಜಿಕ, ಸಹಕಾರಿ ಇದು ಮಹತ್ವದ ಕ್ಷೇತ್ರದ ಆಗಿದೆ. ದಿನೇ ದಿನೇ ಪಾರದರ್ಶಕತೆಯ ಕೊರತೆ ಕಾಣುತ್ತಿದೆ. ಸಜ್ಜನ ಆಡಳಿತ ಮಂಡಳಿಯ ಇರುದಕ್ಕೆ ಶೇರುದಾರ ಸದಸ್ಯರ ಸಂತಸ ಪಡಬೇಕು. ಈ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಬೇಕು. ಎಲ್ಲಾ ಡಿಪೋಸಿಟರ್, ಶೇರುದಾರ ಸದಸ್ಯರ ವಿಶ್ವಾಸ ಪಡೆದುಕೊಂಡಿದೆ.

ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ ‘ಜಿಲ್ಲೆಯಲ್ಲಿಯೇ ಉತ್ತಮ ಕಟ್ಟಡವನ್ನು ಕಟ್ಟಿರುವುದು ಈ ಬ್ಯಾಂಕನ ಸಾಧನೆ. ಚುನಾವಣೆ ಇಲ್ಲದೇ ಇರುವ ಬ್ಯಾಂಕ್ ಇದೇ ಮೊದಲು. ಚುನಾವಣೆ ಆದಲ್ಲಿ ಬ್ಯಾಂಕನ ಶೇರುದಾರರು ಹಣ ಖರ್ಚು ವ್ಯರ್ಥ ಆಗಲಿದೆ. ಅದರ ಬದಲು ಆ ಹಣವನ್ನು ಬಡವರಿಗೆ ಆರೋಗ್ಯ ಹಾಗೂ ಮಕ್ಕಳ ಶಿಕ್ಷಣಕ್ಕೆ ನೀಡಿರುವುದು ಉತ್ತಮ ಕೆಲಸ. ಈ ಆಡಳಿತ ಮಂಡಳಿಯನ್ನು ಉಳಿಸಿಕೊಂಡು ಹೋಗುವುದು ಶೇರುದಾರರ ಜವಾಬ್ದಾರಿ. ರಾಜ್ಯದಲ್ಲಿಯೇ ಪ್ರಥಮ ಬ್ಯಾಂಕ್ ಶೇರುದಾರರಿಗೆ 12% ಡಿವಿಡೆಂಟ್ ಡಿವಿಡೆಂಟ್ ನೀಡುತ್ತಿರುವುದು ಹಾಗೂ 9.5 % ಸಾಲ ಸಿಗುವುದು ಈ ಬ್ಯಾಂಕನಲ್ಲಿ ಮಾತ್ರ. ಇವೆಲ್ಲದರ ನಡುವೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಗ್ರಾಹಕರಿಗೆ ನೀಡಿರುವುದು ಮೆಚ್ಚನಾರ್ಹ. ಬ್ಯಾಂಕ್ ಅಭಿವೃದ್ಧಿಗೆ ಬ್ಯಾಂಕನ ಸಿಬ್ಬಂದಿಯ ಪಾತ್ರ ಸಹ ಅಷ್ಟೇ ಮುಖ್ಯ. 100 ಕ್ಕೆ 100 ಸಾಲ ವಸೂಲಾತಿಯ ಕೆಲಸ ಸಹ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಇದೇ ವೇಳೆ “ರಜತ ಮಹೋತ್ಸವದ ವಿಶೇಷ ಡಿಪೋಸಿಟ್ ಪತ್ರ”ವನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ ‘ಶಿರಾಲಿ ಜನತೆಗೆ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತಹ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆಯಲ್ಲಿ ವಿಚಾರದಲ್ಲಿ ಮಾರುತಿ ಬ್ಯಾಂಕಗೆ ಪ್ರಶಸ್ತಿ ನೀಡಲೇಬೇಕು. ಹೊಸ ಉದ್ಯಮಿಗಳಿಗೆ ಈ ಬ್ಯಾಂಕ್ ಅನ್ನದಾತರರಿದ್ದಂತೆ. ನನಗು ಸಹ ಈ ಬ್ಯಾಂಕ್ ಕಷ್ಟ ಸಮಯದಲ್ಲಿ ಉದ್ಯಮ ಆರಂಭದ ದಿನದಲ್ಲಿ ಕರೆದು ಸಾಲ ನೀಡಿದ್ದಾರೆ. ನಾನು ಸಹಕಾರಿ ಕ್ಷೇತ್ರದಲ್ಲಿದ್ದು ಬ್ಯಾಂಕ ಮುನ್ನಡೆಸುವುದು ಒಂದು ಸಾಧನೆಯೇ ಸರಿ. ಆದರೆ ಜಿಲ್ಲೆಯಲ್ಲಿಯೇ ಮಾರುತಿ ಬ್ಯಾಂಕ ಉತ್ತಮ ಸ್ಥಾನದಲ್ಲಿದೆ. ಗ್ರಾಹಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಬ್ಯಾಂಕನ್ನು ಇನ್ನಷ್ಟು ಅಭಿವೃದ್ಧಿ ಯಾಗುವಂತೆ ಶೇರುದಾರರ ಸಹಕರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಬ್ಯಾಂಕನ ಅಧ್ಯಕ್ಷ ಅಶೋಕ ಪೈ ಮಾತನಾಡಿ ‘ 8700 ಸಂಘದ ಸದಸ್ಯರು ಬರೆದಿಟ್ಟುಕೊಳ್ಳಬೇಕಾದ ಸಮಯ ಈಗ ಬಂದಿದೆ. ಹಲವು ವರ್ಷಗಳ ವಾರ್ಷಿಕ ಸಭೆಯ ಕೂಗು ಸ್ವಂತ ಕಟ್ಟಡವಾಗಿದ್ದು ಅದು ನನಸಾಗಿದೆ. 1999 ರಲ್ಲಿ ಕೆ.ವಿ. ಪ್ರಭು ಅವರಲ್ಲಿ ಚರ್ಚಿಸಿದ್ದೆ ಅಂದು ಅವರೆಲ್ಲರು ಸಹಕಾರದಿಂದ 50 ಪ್ರವರ್ತಕರು ಸೇರಿಸಿ 1999 14 ಜೂನ್ ಈ ಬ್ಯಾಂಕ ಆರಂಭಿಸಿದ್ದೇವೆ. ಕೆ.ವಿ. ಪ್ರಭು ಅವರು 16 ತಿಂಗಳು ಮಾತ್ರ ಅಧ್ಯಕ್ಷರಾಗಿದ್ದರು. ತದನಂತರ ನನ್ನ ಮೇಲೆ ನಂಬಿಕೆಯಿಟ್ಟು ಬ್ಯಾಂಕ ಅಧ್ಯಕ್ಷ ಹುದ್ದೆಯ ಜವಾಬ್ದಾರಿ ವಹಿಸಿದ್ದರು. ಮುಂದೆ ಬ್ಯಾಂಕನಲ್ಲಿ ಗ್ರಾಹಕರಿಗೆ ಎ.ಟಿ.ಎಮ್ ಹಾಗು ವ್ಯವಸ್ಥಾಪಕರ ವಾಸ್ತವ್ಯಕ್ಕೆ ಎರಡು ಮನೆ ನಿರ್ಮಾಣ ಆಗಿದೆ ಎಂದು ಹೇಳಿದರು.

ಬ್ಯಾಂಕಿನ ಲೆಕ್ಕಪರಿಶೋಧಕ ಎಮ್.ಎಚ. ಶೆಟ್ಟಿ ಸೇರಿದಂತೆ ಬ್ಯಾಂಕಿನ ಉಳಿದೆಲ್ಲ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಶ್ಯಾನಭಾಗರಿಂದ ಬ್ಯಾಂಕಿನ ವರದಿ ವಾಚನ ಮಾಡಿದರು.
ವ್ಯವಸ್ಥಾಪಕ ಪ್ರಸನ್ನ ಪ್ರಭು ನಿರೂಪಿಸಿದರೆ, ಬ್ಯಾಂಕನ ನಿರ್ದೇಶಕ ನರೇಂದ್ರ ನಾಯಕ ಸ್ವಾಗತಿಸಿದರು. ಕೊನೆಯಲ್ಲಿ ನಿರ್ದೇಶಕ ರವೀಂದ್ರ ಪ್ರಭು ವಂದಿಸಿದರು.
ವರದಿ:ಉಲ್ಲಾಸ್ ಶಾನಭಾಗ ಶಿರಾಲಿ.
