ದೇಶಾದ್ಯಂತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ ಅಂಗವಾಗಿ, ಇಂದು ಶ್ರೀ ಗುರು ಸುಧೀಂದ್ರ ಕಾಲೇಜಿನ ಶಿಕ್ಷಕರು ಡಿಜಿಟಲ್ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಐತಿಹಾಸಿಕ ಅಭಿಯಾನಕ್ಕೆ ಸಾಕ್ಷಿಯಾದರು. ನೈತಿಕ ಎಐಗಾಗಿ ಸಂಕಲ್ಪ ಹೊಂದಿರುವ ಕೇಂದ್ರ ಸರ್ಕಾರದ ಇಂಡಿಯಾ ಎಐ ಮಿಷನ್ ಮತ್ತು ಇಂಟೆಲ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಲಾದ ಈ ‘ಎಐ ರೆಸ್ಪಾನ್ಸಿಬಿಲಿಟಿ ಕ್ಯಾಂಪೇನ್’ ಅಡಿಯಲ್ಲಿ ಶಿಕ್ಷಕರು ಡಿಜಿಟಲ್ ಪ್ರತಿಜ್ಞೆ ಕೈಗೊಂಡರು. ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ, ನೈತಿಕವಾಗಿ ಮತ್ತು ಮಾನವೀಯ ಮೌಲ್ಯಗಳಿಗೆ ಪೂರಕವಾಗಿ ಬಳಸುವ ಬಗ್ಗೆ ಈ ಅಭಿಯಾನವು ಒತ್ತು ನೀಡಿದೆ. ಕಾಲೇಜಿನ ಪ್ರಾಚಾರ್ಯರು, ಉಪ-ಪ್ರಾಚಾರ್ಯರು, ಪ್ರಾಧ್ಯಾಪಕರು ಡಿಜಿಟಲ್ ಪ್ರತಿಜ್ಞೆ ಅಭಿಯಾನದಲ್ಲಿ ಭಾಗಿಯಾದರು.
ಗಿನ್ನಿಸ್ ದಾಖಲೆಯತ್ತ ಹೆಜ್ಜೆ: ‘ಜವಾಬ್ದಾರಿಯುತ ಎಐ’ ಅಭಿಯಾನದಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಶಿಕ್ಷಕರ ಸಹಭಾಗಿತ್ವ
