ಭಟ್ಕಳ ಜೂಲೈ ೨೮: “ಸಮಾಜ ಸೇವೆಯೇ ರೋಟರಿಯ ಮೂಲ ಧ್ಯೇಯವಾಗಿದ್ದು ಶಿಕ್ಷಣ , ಆರೋಗ್ಯ, ಪರಿಸರ ಸಂರಕ್ಷಣೆ, ಯುವಜನ ಹಾಗು ಮಹಿಳಾ ಸಬಲೀಕರಣ, ವಿಪತ್ತು ಪರಿಹಾರ, ಮತ್ತು ಸಮುದಾಯದ ಸಮಗ್ರ ಅಭಿವೃದ್ಧಿಗೆ ರೋಟರಿ ನಿರಂತರವಾಗಿ ಸೇವಾ ಕಾರ್ಯ ಕೈಗೊಳ್ಳುತ್ತಿದೆ” ಎಂದು ಮೆಡಿಕಲ್ ಕ್ಯಾಂಪ್ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ರೋಟರಿಯನ್ ಡಾ. ದಿನೇಶ್ ಹೆಗಡೆ ಹೇಳಿದರು. ತಾಲೂಕಿನ ಅಮೀನಾ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿದ ೨೦೨೬-೨೭ನೇ ಸಾಲಿನ ರೋಟರಿ ಮತ್ತು ಇಂಟರಾಕ್ಟ್ ಕ್ಲಬ್‌ಗಳ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು, “ರೋಟರಿಯಲ್ಲಿ ಯಶಸ್ಸು ಹುದ್ದೆಯಿಂದ ಅಳೆಯಲ್ಪಡುವುದಿಲ್ಲ, ಸಮಾಜದಲ್ಲಿನ ಎಷ್ಟು ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ ಎಂಬುದರಿAದ ಅಳೆಯಲ್ಪಡುತ್ತದೆ” ಎಂದರು. ರೋಟರಿ ಜಿಲ್ಲೆ ೩೧೭೦ ಉಪ ಗವರ್ನರ್ ಜೈವಿಠಲ್ ಕುಬಾಲ್ ಮಾತನಾಡಿ, “ಮುಂಬರುವ ರೋಟರಿ ವರ್ಷವೂ ಅರ್ಥಪೂರ್ಣ ಸೇವಾ ಯೋಜನೆಗಳು, ಸಮಾಜಮುಖಿ ಕಾರ್ಯಗಳು ಮತ್ತು ಜನೋಪಯೋಗಿ ಸಾಧನೆಗಳಿಂದ ಯಶಸ್ವಿಯಾಗಲಿ” ಎಂದು ಹಾರೈಸಿದರು.

ಈ ಸಂಧರ್ಭದಲ್ಲಿ ಶೈಕ್ಷಣಿಕ ವರ್ಷ ೨೦೨೫-೨೬ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ ೯೯.೩೬ ಅಂಕಗಳಿಸಿದ ತೆರ್ನಮಕ್ಕಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸಾನಿಕಾ ಬೈಲೂರು ಅವರಿಗೆ ಶ್ರೀ ಎಂ ಎ ಘನಿ ಸ್ಮಾರಕ ವಿದ್ಯಾರ್ಥಿ ವೇತನ, ಮತ್ತು ಶಾಲೆಗೆ ಶ್ರೀ ಜಯರಾಮ್ ಕೊಲ್ಲೆ ಸ್ಮಾರಕ ರೋಲಿಂಗ್ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು. ಹಾಗೂ ವೃತ್ತಿಪರ ಕ್ಷೇತ್ರದ ಸಾಧನೆಗಾಗಿ ಪತ್ರಿಕೆ ವಿತರಕರಾದ ಶ್ರೀ ಫ್ರಾನ್ಸಿಸ್ ಡಿಸೋಜಾ, ಮತ್ತು ಹೆಸ್ಕಾಂ ಲೈನ್ ಮ್ಯಾನ್ ಶ್ರೀ ಗೊಯ್ದ ಸನ್ನು ಗೊಂಡ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕದಲ್ಲಿ ನಿರಂತರ ಆರೋಗ್ಯ ಕ್ಷೇತ್ರದ ಸೇವೆಗಾಗಿ ಶ್ರೀ ಭಾಸ್ಕರ್ ನಾಯ್ಕ್ ಮತ್ತು ಶ್ರೀಮತಿ ಭವಾನಿ ರಘು ಶೆಟ್ಟಿ ಅವರಿಗೆ ೨೦೨೬-೨೭ನೇ ಸಾಲಿನ ರೋಟರಿ ವೊಕೇಶನಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ದಿವ್ಯಾಂಗರಿಗೆ ಪ್ರೇರಣೆ ಯಾಗಿರುವ ಸಂಗೀತ ಕ್ಷೇತ್ರದ ಸಾಧಕ ವಿಶೇಷ ವಿದ್ಯಾರ್ಥಿ ಶಾಯಲ್ ಗೋಮ್ಸ್ ಅವರನ್ನು ಸನ್ಮಾನಿಸಲಾಯಿತು ಮತ್ತು ನೂತನ ಸದಸ್ಯರನ್ನು ಬರಮಾಡಿಕೊಳ್ಳಲಾಯಿತು.
